ಶುಕ್ರವಾರ, ಅಕ್ಟೋಬರ್ 18, 2019
23 °C

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳಿಗೆ ಆಯ್ಕೆ

Published:
Updated:
Prajavani

ಬೀದರ್: ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಗಳಿಗೆ ಶುಕ್ರವಾರ ಅಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಾಮಾನ್ಯ ಸ್ಥಾಯಿ ಸಮಿತಿ: ಅಧ್ಯಕ್ಷ– ಲಕ್ಷ್ಮಣರಾವ್ ಬುಳ್ಳಾ, ಸದಸ್ಯರು–ಬಾಬುಸಿಂಗ್ ವಿಠ್ಠಲಸಿಂಗ್, ರವೀಂದ್ರರೆಡ್ಡಿ ಗುಂಡಾರೆಡ್ಡಿ, ಅಫ್ರೋಜ್‌ ಖಾನ್, ಸುಧೀರಕುಮಾರ್ ಕಾಡಾದಿ, ಆನಂದ ವಿಠ್ಠಲರಾವ್.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಅಧ್ಯಕ್ಷ– ಉಷಾ ರಾಜೇಂದ್ರ, ಸದಸ್ಯರು– ಜೈಯಶ್ರೀ ರಾಠೋಡ್, ವಿಜಯಕುಮಾರ ಪಾಟೀಲ, ಅಂಬಾದಾಸ ಕೋರೆ, ಶೀತಲ್ ಚವ್ಹಾಣ, ರವೀಂದ್ರರೆಡ್ಡಿ ಗುಂಡಾರೆಡ್ಡಿ.

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ: ಅಧ್ಯಕ್ಷೆ ಮಂಜುಳಾ ಸ್ವಾಮಿ, ಸದಸ್ಯರು–ರೇಖಾಬಾಯಿ ನೀಲಕಂಠ, ವಿಜಯಕುಮಾರ ಪಾಟೀಲ, ಶೀತಲ್ ಚವ್ಹಾಣ, ಬಾಬುಸಿಂಗ್ ವಿಠ್ಠಲಸಿಂಗ್, ಅಫ್ರೋಜ್‌ ಖಾನ್, ರಾಜಶೇಖರ ಬಸವಣಪ್ಪ.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಅಧ್ಯಕ್ಷ– ಸಂಧ್ಯಾರಾಣಿ ರಾಮ, ಸದಸ್ಯರು– ರಾಜಶೇಖರ ಬಸವಣಪ್ಪ. ಜಯಶ್ರೀ ರಾಠೋಡ್, ರೇಖಾಬಾಯಿ ನೀಲಕಂಠ, ಅಂಬಾದಾಸ ಕೋರೆ, ಸುಧೀರಕುಮಾರ ಕಾಡಾದಿ ಹಾಗೂ ಆನಂದ ವಿಠಲರಾವ್.

ಚುನಾವಣಾಧಿಕಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್. ಕಾರ್ಯ ನಿರ್ವಹಿಸಿದರು. ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ ಇದ್ದರು.

ನೂತನ ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಅಭಿನಂದಿಸಿದರು.

Post Comments (+)