ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಭೂಮಿಯಲ್ಲಿ ಸಮಾಧಿಯೇ ಸಮಸ್ಯೆ

Last Updated 23 ಡಿಸೆಂಬರ್ 2013, 6:48 IST
ಅಕ್ಷರ ಗಾತ್ರ

ಬೀದರ್: ಜನಸಂಖ್ಯೆಯು ಬೆಳೆ­ದಂತೆಲ್ಲಾ ವಸತಿಯೊಂದಿಗೆ ಕಾಡುವ ಇನ್ನೊಂದು ಸಮಸ್ಯೆ ಮನುಷ್ಯ ಚಿರನಿದ್ರೆಗೆ ಜಾರಿದ ಬಳಿಕ ಅಂತಿಮ ಕ್ರಿಯೆಗಳನ್ನು ಬೇಕಾದ ರುದ್ರ­ಭೂಮಿಯದ್ದು. ನಗರದಲ್ಲಿರುವ ಸಾರ್ವ­ಜನಿಕ  ರುದ್ರಭೂಮಿಯಲ್ಲೂ ಈಗ ಸ್ಥಳದ ಸಮಸ್ಯೆ ಎದುರಾಗಿದೆ. ಅಲ್ಲಿರುವ ಸಮಾಧಿಗಳೇ ಸಮಸ್ಯೆಯಾಗಿವೆ!

ಗುಂಪಾ ರಸ್ತೆಯಲ್ಲಿ ಬಿ.ವಿ.ಭೂಮ­ರೆಡ್ಡಿ ಕಾಲೇಜು ಬಳಿಯ  ರುದ್ರಭೂಮಿ ಲಭ್ಯ ಮಾಹಿತಿ ಪ್ರಕಾರ, ಸುಮಾರು ಐದು ಎಕರೆ ವ್ಯಾಪ್ತಿ­ಯಲ್ಲಿದೆ. ಪ್ರಸ್ತುತ ಮೂಲ­ಸೌಕರ್ಯಗಳ ಕೊರತೆ­ಯಿಂದಾಗಿ ಸಮಾಧಿ ನಿರ್ಮಾಣ ಮಾಡುವ, ಅಂತ್ಯಕ್ರಿಯೆ ನೆರವೇರಿಸುವ ಪ್ರಕ್ರಿಯೆ ರುದ್ರಭೂಮಿ ಪ್ರದೇಶದ ಒಂದು ಭಾಗಗಷ್ಟೇ ಸೀಮಿತವಾಗಿದೆ.

ಆ ಜಾಗವನ್ನೂ ಬಹುತೇಕ ಸಮಾಧಿಗಳೇ ಆವರಿಸಿರುವ ಕಾರಣ, ಹೊಸದಾಗಿ ಸಮಾಧಿ ನಿರ್ಮಾಣ ಮಾಡುವುದಿರಲಿ, ಅಂತ್ಯ ಸಂಸ್ಕಾರ ಗಳಿಗೂ ಸ್ಥಳಾವಕಾಶದ ಸಮಸ್ಯೆ­ಯಾಗಿದೆ ಎಂಬುದು ಸಾರ್ವಜನಿಕರ ದೂರು.

ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗ ನಿರ್ಮಾಣ ಮಾಡಿ­ರುವ ಸಮಾಧಿಗಳನ್ನು ಸಂಬಂಧಿಸಿದ ಸಾರ್ವಜನಿಕರೇ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು ಎಂದು ಜಿಲ್ಲಾ­ಡಳಿತ ಈಚೆಗೆ ಆದೇಶ ಹೊರಡಿಸಿತ್ತು. ಆದರೆ ಆ ಆದೇಶವೂ ಒಂದು ವರ್ಗದ ಕೋಪಕ್ಕೆ ತುತ್ತಾಗಿದೆ.

ಇನ್ನೊಂದೆಡೆ ಇಂಥ ಕೋಪಕ್ಕೆ ವಾಸ್ತವ ಸ್ಥಿತಿ ತಿಳಿಯದೇ ಜಿಲ್ಲಾಧಿಕಾರಿ­ಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ವ್ಯಕ್ತ ಮಾಡಲಾಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

ಇದು ಭಾವನಾತ್ಮಕವಾದ ವಿಷಯ. ಸಮಾಧಿ ಕೆಡವಲು ಆದೇಶಿಸುವುದು ಸರಿಯಲ್ಲ’ ಎಂದು ಬಿಜೆಪಿಯ ಯುವ ಘಟಕ ಟೀಕಿಸಿದೆ.
ಅತ್ತ ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ನಿಂತಿರುವ ಕೆಲ ಸಮುದಾಯದ ಪ್ರಮು­ಖರು, ‘ಸಮಾಧಿಗಳನ್ನು ತೆರವು­ಗೊಳಿಸ­ಬೇಕು ಎಂಬುದು ವಿವಿಧ ಜಾತಿ, ಸಂಘಟನೆಗಳ ಮುಖಂಡರು ಭಾಗ­ವಹಿಸಿದ್ದ ಸಭೆಯ ತೀರ್ಮಾನ. ಅದನ್ನು ಜಿಲ್ಲಾಧಿಕಾರಿಗಳು ಜಾರಿಗೆ ತರಲು ಮುಂದಾಗಿದ್ದಾರೆ. ಈ ವಿಷಯದಲ್ಲಿ ಅವರ ದೂಷಣೆ ಸಲ್ಲದು’ ಎನ್ನುತ್ತಾರೆ. ರುದ್ರಭೂಮಿ ಒಟ್ಟು ಜಾಗ ಹೆಚ್ಚಿದ್ದರೂ, ಗಟ್ಟಿಯಾದ ಕಲ್ಲು­ಗಳಿರುವ ಭೂಮಿ. ಜೊತೆಗೆ ಜನರು ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ, ನೀರು ಸೌಲಭ್ಯ, ಸುತ್ತುಗೋಡೆ ಇಲ್ಲ. ಎಲ್ಲರೂ ಸಮಾಧಿ ಕಟ್ಟುತ್ತಾ ಹೋದರೆ ಹೊಸದಾಗಿ ಸಾವಿನ ಪ್ರಕರಣಗಳಲ್ಲಿ ಏನು ಮಾಡಬೇಕು. ಶವದ ಅಂತ್ಯ­ಕ್ರಿಯೆಗೆ ಜಾಗವಾದರೂ ಬೇಕಲ್ಲ? ಹಳೆಯ ಸಮಾಧಿಗಳನ್ನು ತೆರವು­ಗೊಳಿಸು­ವುದೇ ಪರಿಹಾರ’ ಎನ್ನುತ್ತಾರೆ ಲಿಂಗಾಯತ ಅಭಿವೃದ್ಧಿ ಸಮಾಜದ ಅಧ್ಯಕ್ಷ ಬಿ.ಜಿ ಶೆಟಕಾರ್‌.

ಈ ಹಿಂದಿನ ಸಭೆಯಲ್ಲಿಯೇ ಈ ನಿರ್ಣಯ ಆಗಿದ್ದು, ಅದರ ಪ್ರಕಾರ, ಈಗಿರುವ ಸಮಾಧಿಗಳನ್ನು ತೆರವು­ಗೊಳಿಸಲು ಕ್ರಮ ಕೈಗೊಳ್ಳಬೇಕು ಮತ್ತು ರುದ್ರಭೂಮಿಯ ಸುತ್ತಲೂ ಸುತ್ತುಗೋಡೆ ನಿರ್ಮಾಣ ಸೇರಿದಂತೆ ಮೃತರ ಕುಟುಂಬದ ಸದಸ್ಯರು, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಬೇಕಾದ ಸೌಲಭ್ಯ­ಗಳನ್ನು ಒದಗಿಸಲು ಜಿಲ್ಲಾಡಳಿತ ಮುಂದಾಗ­ಬೇಕು ಎಂದು ಪ್ರಮುಖರು ಒತ್ತಾಯಿಸಿದ್ದರು.
ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ ಶಿವಶರಣಪ್ಪ ವಾಲಿ, ‘ವಿವಿಧ ಮುಖಂಡರು ಭಾಗವಹಿಸಿದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ­ದ್ದಾರೆ. ವಾಸ್ತವವನ್ನು  ಅರಿ­ಯದೇ ಹೇಳಿಕೆ ನೀಡುವುದು ಸೌಹಾರ್ದತೆ ಕಡುವ ಯತ್ನವಾಗುತ್ತದೆ’ ಎಂದು ಹೇಳುತ್ತಾರೆ.

ರುದ್ರಭೂಮಿಯಲ್ಲಿ ಸೌಲಭ್ಯ ಉತ್ತಮ ಪಡಿಸುವುದರ ಪರ ಬಹುತೇಕ ಮುಖಂಡರು ಇರುವ ಕಾರಣ, ಜಿಲ್ಲಾಡಳಿತ ಪೂರಕವಾಗಿ ಸೌಲಭ್ಯ ಉತ್ತಮಪಡಿಸಲು ಮುಂದಾ­ಗ­ಬೇಕು ಎಂದು ಮನವಿಯೂ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT