ಬೀದರ್: ಉದ್ಯೋಗ ಖಾತರಿ ಯೋಜ ನೆಯನ್ನು ಸಮರ್ಪಕವಾಗಿ ಜಾರಿ ಗೊಳಿಸಲು ಒತ್ತಾಯಿಸಿ ಜನಮಿತ್ರ ಐಕ್ಯ ವೇದಿಕೆ ಜಿಲ್ಲಾ ಘಟಕದ ಮುಂದಾಳ ತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಿಂದ ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಭಗತ್‌ಸಿಂಗ್ ವೃತ್ತ, ತಹಶೀಲ್ದಾರ್ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.

ಉದ್ಯೋಗ ಖಾತರಿ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿ ಯಾಗುತ್ತಿಲ್ಲ. ಕುಟುಂಬವೊಂದಕ್ಕೆ ವರ್ಷದಲ್ಲಿ ನೂರು ದಿನಗಳ ಉದ್ಯೋಗ ಕೊಡಬೇಕು ಎಂಬ ನಿಯಮ ಇದ್ದರೂ, 30-40 ದಿನ ಮಾತ್ರ ಕೆಲಸ ಕೊಡ ಲಾಗುತ್ತಿದೆ. ಕೂಲಿಕಾರರು ಸಿಗುತ್ತಿಲ್ಲ ಎಂಬ ನೆಪವೊಡ್ಡಿ ಖಾಸಗಿ ಗುತ್ತಿಗೆದಾ ರರಿಂದ ಜೆಸಿಬಿ ಯಂತ್ರ ಬಳಸಿ ಕಾಮ ಗಾರಿ ಕೈಗೊಳ್ಳಲಾಗುತ್ತಿದ್ದು, ಕಾರ್ಮಿಕ ರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲೆಯ 175 ಗ್ರಾಮ ಪಂಚಾಯಿ ತಿಗಳ ಪೈಕಿ ಯಾವುದೇ ಪಂಚಾಯಿ ತಿಯಲ್ಲಿ ನೂರಕ್ಕೆ ನೂರು ದಿನ ಕೆಲಸ ನೀಡಿದ ಉದಾಹರಣೆಗಳಿಲ್ಲ. ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಕೆಲಸ ಕೊಡದಿದ್ದರೆ ನಿರುದ್ಯೋಗ ಭತ್ಯೆ ನೀಡ ಬೇಕು ಎಂಬ ನಿಯಮವೂ ಜಾರಿಗೆ ಬರುತ್ತಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಜಾಬ್‍ಕಾರ್ಡ್‌ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ತಮಗೆ ಅನು ಕೂಲವಾಗುವ ರೀತಿಯಲ್ಲಿ ಬಳಸಿಕೊ ಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಉದ್ಯೋಗ ಖಾತರಿ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಕೆಲಸ ಕೊಡಬೇಕು. ಆಯಾ ಪಂಚಾಯಿತಿ ಗಳಿಂದ ಕೂಲಿಕಾರರಿಗೆ ಸಲಕರಣೆ ಗಳನ್ನು ವಿತರಿಸಬೇಕು. ಕಾಮಗಾರಿಗಳ ಆಯ್ಕೆಯನ್ನು ವಾರ್ಡ್ ಮತ್ತು ಗ್ರಾಮಸಭೆ ಮೂಲಕವೇ ಮಾಡಬೇಕು. 15 ದಿನಗಳ ಒಳಗೆ ಕೂಲಿ ಹಣ ಪಾವತಿಸಬೇಕು. ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯಲ್ಲಿಯೇ ನಡೆಯಬೇಕು. 15 ದಿನಗಳಲ್ಲಿ ಕೆಲಸ ಒದಗಿಸದಿದ್ದರೆ ನಿರುದ್ಯೋಗ ಭತ್ಯೆ ಕೊಡಬೇಕು. ಜೆಸಿಬಿ ಮೂಲಕ ಕಾಮ ಗಾರಿ ಕೈಗೊಂಡಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬಿ ತ್ಯಾದಿ ಬೇಡಿಕೆಗಳನ್ನು ಮಂಡಿಸಿದ್ದಾರೆ.

ಜಿಲ್ಲಾ ಉಪಾಧ್ಯಕ್ಷ ಪ್ರಭುದಾಸ್ ಸಂತಪುರ, ಕಾರ್ಯದರ್ಶಿ ಸಂಜೀವ ಕುಮಾರ್ ನಾಗಮಾರಪಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.