ಭಾನುವಾರ, ಆಗಸ್ಟ್ 18, 2019
25 °C

ಶಿವಮೊಗ್ಗ | ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಹೋಮ

Published:
Updated:
Prajavani

ಶಿವಮೊಗ್ಗ: ಬಿಜೆಪಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂದು ಪ್ರಾರ್ಥಿಸಿ ಜಿಲ್ಲಾ ಅರ್ಚಕರ ಸಂಘ ಬುಧವಾರ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ವಿಶೇಷ ಪೂಜೆ, ಹವನ ಹಮ್ಮಿಕೊಂಡಿತ್ತು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಲಿ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ನಿವಾರಣೆಗೊಳ್ಳಲಿ. ಬಿಜೆಪಿಗೆ ರಾಜ್ಯದಲ್ಲಿ ಒಳ್ಳೆಯ ದಿನಗಳು ಬರಲಿ ಎಂದು ಬೇಡಿಕೊಂಡರು.

ಅರ್ಚಕರ ಸಂಘದ ಅಧ್ಯಕ್ಷ ಎಚ್.ಜಿ.ನಾಗರಾಜ್ ಶಾಸ್ತ್ರಿ ಅವರ ನೇತೃತ್ವದಲ್ಲಿ ಸುಮಾರು 25 ಅರ್ಚಕರು ಹೋಮ ನಡೆಸಿದರು.

ಯಡಿಯೂರಪ್ಪ ಪುತ್ರಿ ಎಸ್.ವೈ. ಅರುಣಾದೇವಿ, ಬಿಜೆಪಿ ಮುಖಂಡರಾದ ಎಚ್.ಸಿ.ಬಸವರಾಜಪ್ಪ, ಜ್ಯೋತಿ ಪ್ರಕಾಶ್, ಧೀರರಾಜ್ ಹೊನ್ನವಿಲೆ, ದೀನ ದಯಾಳು, ಬಳ್ಳೆಕೆರೆ ಸಂತೋಷ್, ಬಸವರಾಜ್ ಭಾಗವಹಿಸಿದ್ದರು.

Post Comments (+)