ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸಕ್ರಿಯ ಪ್ರಕರಣ 1000ಕ್ಕಿಂತಲೂ ಕಡಿಮೆ

ಸೋಂಕು ದೃಢಪಟ್ಟ ಪ್ರಕರಣ 111, ಲೆಕ್ಕಕೊಟ್ಟಿದ್ದು 98
Last Updated 18 ಜೂನ್ 2021, 17:16 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 98 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 187 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,000ಕ್ಕಿಂತ ಕೆಳಗೆ ಬಂದಿದೆ.

ಜಿಲ್ಲೆಯಲ್ಲಿ ಸದ್ಯ 929 ಮಂದಿ ಸೋಂಕಿತರಿದ್ದಾರೆ. ಐಸಿಯುನಲ್ಲಿ ದಾಖಲಾಗಿರುವವರ ಸಂಖ್ಯೆ ಹೆಚ್ಚಳವಾಗಿದ್ದು, 45 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 28 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 29,998ಕ್ಕೆ ಏರಿದೆ. 28,582 ಮಂದಿ ಗುಣಮುಖರಾಗಿದ್ದಾರೆ.

111 ಪ್ರಕರಣ ದೃಢ: ಶುಕ್ರವಾರ 1,554 ಕೋವಿಡ್‌ ಪರೀಕ್ಷಾ ವರದಿಗಳು ಬಂದಿದ್ದು, 1,443 ವರದಿಗಳು ನೆಗೆಟಿವ್‌ ಬಂದಿವೆ. 111 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಆದರೆ, ಜಿಲ್ಲಾಡಳಿತ ಮಾಧ್ಯಮಗಳಿಗೆ ನೀಡಿರುವ ವರದಿಯಲ್ಲಿ 98 ಹೊಸ ಪ್ರಕರಣಗಳನ್ನು ಮಾತ್ರ ಉಲ್ಲೇಖಿಸಿದೆ. ಉಳಿದ ಪ್ರಕರಣಗಳನ್ನು ಕೈಬಿಟ್ಟಿರುವುದಕ್ಕೆ ಕಾರಣ ತಿಳಿಸಿಲ್ಲ.‌

98 ಸೋಂಕಿತರಲ್ಲಿ ಚಾಮರಾಜನಗರ ತಾಲ್ಲೂಕಿನ 34, ಗುಂಡ್ಲುಪೇಟೆ ತಾಲ್ಲೂಕಿನ 23, ಕೊಳ್ಳೇಗಾಲದ 16, ಹನೂರಿನ 13, ಯಳಂದೂರು ತಾಲ್ಲೂಕಿನ 12 ಮಂದಿ ಸೇರಿದ್ದಾರೆ.

ಆಸ್ಪತ್ರೆಯಲ್ಲಿದ್ದ 18, ಕೋವಿಡ್‌ ಕೇರ್‌ ಕೇಂದ್ರದ 161, ಹೋಂ ಐಸೊಲೇಷನ್‌ನಲ್ಲಿದ್ದ 8 ಜನರು ಸೇರಿದಂತೆ 187 ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ ಚಾಮರಾಜನಗರ ತಾಲ್ಲೂಕಿನ 79, ಗುಂಡ್ಲುಪೇಟೆ 43, ಕೊಳ್ಳೇಗಾಲದ 24, ಹನೂರಿನ 29, ಯಳಂದೂರು ತಾಲ್ಲೂಕಿನ 10 ಹಾಗೂ ಹೊರ ಜಿಲ್ಲೆಯ ಇಬ್ಬರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT