ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ: ಆದಿವಾಸಿ ನಾಯಕ ಬಿರ್ಸಾಮುಂಡಾ ಭಾವಚಿತ್ರ ಮೆರವಣಿಗೆ

Published : 10 ಆಗಸ್ಟ್ 2024, 14:32 IST
Last Updated : 10 ಆಗಸ್ಟ್ 2024, 14:32 IST
ಫಾಲೋ ಮಾಡಿ
Comments

ಗುಂಡ್ಲುಪೇಟೆ: ಪಟ್ಟಣದಲ್ಲಿ ಆದಿವಾಸಿ ಮತ್ತು ಗಿರಿಜನ ಸಂಘಟನೆಗಳ ವತಿಯಿಂದ ಶನಿವಾರ ಆದಿವಾಸಿ ದಿನಾಚರಣೆ ಆಚರಿಸಲಾಯಿತು.

ಆದಿವಾಸಿ ನಾಯಕ ಬಿರ್ಸಾಮುಂಡಾ ಅವರ ಭಾವಚಿತ್ರನ್ನು ಅಲಂಕೃತ ವಾಹನದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಮೆರವಣಿಗೆಯುದ್ದಕ್ಕೂ ಜೈಕಾರ ಹಾಕಲಾಯಿತು. ಸಮುದಾಯದ ಮಂದಿ ಸಾಂಪ್ರಾದಾಯಿಕ ನೃತ್ಯ ಮಾಡಿ ಮೆರವಣಿಗೆಗೆ ರಂಗು ತಂದರು.

ಸಂಘಟನೆ ಮುಖಂಡ ರಾಜೇಂದ್ರ ಮಾತನಾಡಿ, ಪಟ್ಟಣದಲ್ಲಿ 30ನೇ ಆದಿವಾಸಿ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ 90 ದೇಶಗಳಲ್ಲಿ ಆದಿವಾಸಿ ಜನರಿದ್ದೇವೆ. ನಮ್ಮ ಸಮುದಾಯ ಜನರು 7 ಸಾವಿರ ಭಾಷೆಗಳನ್ನು ಮಾತನಾಡುತ್ತಾರೆ. ಆ.9 ರಂದು ಆದಿವಾಸಿ ದಿನಾಚರಣೆ ಆಚರಿಸಲಾಗುತ್ತಿದ್ದು, ಇನ್ನೂ ಮುಂದೆ ಸರ್ಕಾರವೇ ದಿನಾಚರಣೆ ಆಚರಿಸಬೇಕು. ಅಲ್ಲದೇ ಆದಿವಾಸಿ ದಿನವನ್ನು ರಜಾ ದಿನವಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮೂಲಸ್ಥಳದಲ್ಲಿ ಮೆರವಣಿಗೆ ಕೊನೆಗೊಂಡಿತು. ನಂತರ ಪ್ರಸಾದ ವಿತರಿಸಲಾಯಿತು. ಆದಿವಾಸಿ ಮತ್ತು ಗಿರಿಜನ ಮುಖಂಡರು ಮತ್ತು ಯುವಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT