ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ಗಾಳಿಗೆ ನೆಲಕಚ್ಚಿದ ಬಾಳೆ: ಸಂಕಷ್ಟದಲ್ಲಿ ರೈತ

Published 27 ಏಪ್ರಿಲ್ 2024, 6:07 IST
Last Updated 27 ಏಪ್ರಿಲ್ 2024, 6:07 IST
ಅಕ್ಷರ ಗಾತ್ರ

ಹನೂರು: ಈಚೆಗೆ ಬೀಸಿದ ಭಾರಿ ಗಾಳಿಗೆ ಕಾಮಗೆರೆ ಗ್ರಾಮದ ವೆಂಕಟೇಶ್ ಅವರಿಗೆ ಸೇರಿದ ಜಮೀನಿನಲ್ಲಿ ನೇಂದ್ರ ಬಾಳೆ ನೆಲಕಚ್ಚಿದೆ.

ಮೋಡಳ್ಳಿಯಲ್ಲಿರುವ ಐದು ಎಕರೆ ಜಮೀನಿನ ಪೈಕಿ‌ ಮೂರು ಎಕರೆಯಲ್ಲಿ ನೇಂದ್ರ ಬಾಳೆ ಬೆಳೆದಿದ್ದರು. ಸುಮಾರು ಐದು ಸಾವಿರ ಬಾಳೆ ಗಿಡಗಳನ್ನು ಹಾಕಿದ್ದು ಬಹುತೇಕ ಎಲ್ಲಾ ಮರಗಳನ್ನು ಬಾಳೆ ಹಣ್ಣು ಕಟಾವಿಗೆ ಬಂದಿದ್ದವು. ಆದರೆ ಈಚೆಗೆ ಬೀಸಿದ ಭಾರಿ ಗಾಳಿಗೆ ಸುಮಾರು ಎರಡು ಸಾವಿರ ಮರಗಳು ನೆಲಕ್ಕುರಳಿವೆ. ವರ್ಷದಿಂದ ಜತನದಿಂದ ಕಾಪಾಡಿಕೊಂಡು ಬಂದಿದ್ದ ಫಸಲು ಈಗ ನೆಲಕಚ್ಚಿರುವುದರಿಂದ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕು ಎಂದು ರೈತ ವೆಂಕಟೇಶ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT