ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಈ ಹಣತೆ ಬೆಳಕು ಚಲ್ಲಿದರೆ ಭುವಿಯಲ್ಲ ಹಸಿರು!

ಗೌಡಹಳ್ಳಿ: ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಜಾಗೃತಿ, ಹಣತೆ ನಿರ್ಮಾಣದಲ್ಲಿ ಬೀಜಗಳ ಬಳಕೆ
Last Updated 13 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಯಳಂದೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಈ ಬಾರಿಯ ದೀಪಾವಳಿಗೆ ಹಸಿರು ಹಣತೆ ಸಿದ್ಧಪಡಿಸಿದ್ದಾರೆ. ಈ ಹಣತೆ ಬಳಸಿ ಒಂದೆಡೆ ಇಟ್ಟರೆ ಸಸಿಗಳಾಗಿಚಿಗುರುತ್ತವೆ!

ಪರಿಸರ ಸಂರಕ್ಷಣೆಯ ಭಾಗವಾಗಿ ತಾವೇ ತಯಾರಿಸಿರುವ ರಾಸಾಯನಿಕ ಮುಕ್ತದೀವಿಗೆಗಳನ್ನು ಗ್ರಾಮೀಣ ಜನರಿಗೆ ವಿತರಿಸಿ, ಜಾಗೃತಿ ಮೂಡಿಸುತ್ತಿದ್ದಾರೆ.

ತಾಲ್ಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ವಾರಗಳಿಂದ ಹಣತೆ ತಯಾರಿ ನಡೆದಿದೆ. ಮನೆಯಲ್ಲಿ ಲಭಿಸುವ ಅಕ್ಕಿ ಮತ್ತು ಕಾಫಿ ಪುಡಿ, ಸುಣ್ಣ, ನೀಲಿ,ಕುಂಕುಮ ಮತ್ತು ಅರಿಸಿನ ಬಳಸಿ ಮಣ್ಣನ್ನು ಸಿದ್ಧಪಡಿಸಲಾಗುತ್ತದೆ. ಮಣ್ಣಿನಲ್ಲಿ ವಿವಿಧ ಹಣ್ಣಿನ ಬೀಜಗಳನ್ನು ಸೇರಿಸಿ ಅದರಿಂದ ಹಣತೆಗಳನ್ನು ತಯಾರಿಸಲಾಗುತ್ತಿದೆ.

‘ಕಪ್ಪು ಮಣ್ಣು ಸ್ಥಳೀಯವಾಗಿ ಸಿಗುತ್ತದೆ. ಇದನ್ನು ನೀರು ಮತ್ತು ಹಟ್ಟಿ ಗೊಬ್ಬರ ಹಾಕಿ ಮೃದು ಮಾಡಲಾಗುತ್ತದೆ. ನಂತರ ಬೇವು, ಸೀಬೆ, ಸೀತಾಫಲ ಮತ್ತಿತರ ಬೀಜಗಳನ್ನುಸೇರಿಸುತ್ತೇವೆ. ಹಣತೆಗೆ ಮೆರಗು ನೀಡಲು ಸುಣ್ಣ, ಧಾನ್ಯದ ಹಿಟ್ಟು ಬಳಕೆ ಮಾಡುತ್ತೇವೆ.ಹಬ್ಬ ಮುಗಿದ ನಂತರ ಹಿತ್ತಲು, ರಸ್ತೆಬದಿ, ಹೊಲದ ಸಮೀಪ ಇಡಬಹುದು. ಸ್ವಲ್ಪ ಮಳೆ ನೀರು
ಹನಿದರು ಹಣತೆ ಕರಗಿ ಅದರಲ್ಲಿರುವ ಬೀಜಗಳು ಮೊಳಕೆಯೊಡೆಯುತ್ತವೆ’ ಎನ್ನುತ್ತಾರೆ ಜಿಲ್ಲಾ ಯುವ ಸಮಿತಿ
ಅಧ್ಯಕ್ಷ ಎಸ್. ಪ್ರದೀಪ್.

ಪರಿಸರ ಸ್ನೇಹಿ ಹಬ್ಬ:‘ಹೊಸದಾಗಿ ಮಾರುಕಟ್ಟೆಗೆ ಬರುವ ಮೇಣದ ದೀಪಗಳಲ್ಲಿ ಪೆಟ್ರೋಲಿಯಂ ಉಪ ಉತ್ಪನ್ನ ಲೇಪಿಸಿರುತ್ತಾರೆ. ಚೈನೀಸ್ ಬಣ್ಣದ ಬಲ್ಬ್‌ಗಳಲ್ಲಿ ಹೆಚ್ಚಿನ ಪ್ಯಾರಾಫಿನ್ ವ್ಯಾಕ್ಸ್ಇರುತ್ತದೆ. ಇವು ಭುವಿಗೆ ಸೇರಿದಾಗ ಮಣ್ಣಿನ ಮಾಲಿನ್ಯದ ಜತೆಗೆ ನಮ್ಮ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ನೀರು ಮತ್ತು ಗಾಳಿಯಲ್ಲಿ ಸೇರಿದರೆ ಅಪಾಯಕಾರಿ.ಇವುಗಳ ಬದಲಾಗಿ ಖರ್ಚು ಬೇಡದ ಪರಿಸರ ಸ್ನೇಹಿ ಹಣತೆಗಳನ್ನು ಹಚ್ಚಬಹುದು. ಇದು ಹಬ್ಬದಮೆರುಗನ್ನು ಹೆಚ್ಚಿಸುತ್ತದೆ. ಸಂಸ್ಖೃತಿಯ ಸ್ಪರ್ಶದ ಅನುಭೂತಿಯನ್ನುಕಟ್ಟಿಕೊಡುತ್ತದೆ. ಮಕ್ಕಳಿಗೆ ಹಬ್ಬದ ಆಚರಣೆಯ ಮಹತ್ವ ಬಿಂಬಿಸುತ್ತದೆ. ಹಾಗಾಗಿ,ಮಣ್ಣಿನ ಹಣತೆಗಳನ್ನು ಬಳಸಬೇಕು’ ಎಂದು ಪ್ರದೀಪ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಂಸ್ಕೃತಿಕ ಮನ್ನಣೆ ನೀಡುವ ರಂಗೋಲಿಯೂ ನಿಸರ್ಗಕ್ಕೆ ಪೂರಕ ಆಗಿರಬೇಕು. ಝಗ ಮಗಿಸುವ ರಂಗು ರಂಗಿನ ಬಣ್ಣಗಳಲ್ಲಿ ರಾಸಾಯನಿಕ ಇರುತ್ತದೆ. ಹೂ ದಳ, ಕಲ್ಲು ಪುಡಿ, ಬೀಜಗಳ ಸಹಜಬಣ್ಣಗಳನ್ನು ಬಳಸಿದ ರಂಗೋಲಿ ನಡುವೆ ಪುಷ್ಪಗಳ ಎಲೆ, ಕೇಸರ ಉದುರಿಸಿ, ನಡುವೆ ಹಣತೆಹೆಚ್ಚಿದರೆ ಹಬ್ಬದ ಮಿನುಗು, ಮಿಂಚು ಹೆಚ್ಚುತ್ತದೆ. ಹೆಣ್ಣುಮಕ್ಕಳ ಸೃಜನಶೀಲತೆಯ ಪರಿಚಯವೂಆಗುತ್ತದೆ’ ಎಂದು ಮಲಾರಪಾಳ್ಯ ಶಾಲೆಯ ವಿದ್ಯಾರ್ಥಿಗಳಾದ ಅಮೃತ, ಖುಷಿ, ಇಂಚರ, ಸಂದೀಪ,ಅರ್ಜುನ್ ಮತ್ತು ಮಹದೇಪ್ರಸಾದ್ ಅವರು ಹೇಳಿದರು.

‘ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪಟಾಕಿ ಬಿಟ್ಟು, ಹಸಿರು ದೀಪಾವಳಿ ಆಚರಿಸಲುಜಾಗೃತಿ ಮೂಡಿಸಲಾಗಿದೆ. ಸಂಸ್ಥೆಯ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ನೆರವುಕಲ್ಪಿಸಲಾಗುವುದು’ ಎಂದು ಪಿಡಿಒ ಶಿವಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT