ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ‘ಆನೆ’ಯನ್ನು ಅಪ್ಪಿದ ನಾಗರಾಜು, ಬೆಂಬಲಿಗರು

Last Updated 18 ಆಗಸ್ಟ್ 2021, 16:44 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ನಾಗರಾಜು (ಕಮಲ್) ಹಾಗೂ ಅವರ 30ಕ್ಕೂ ಹೆಚ್ಚು ಬೆಂಬಲಿಗರು ಬುಧವಾರ ಪಕ್ಷ ತೊರೆದು ಬಿಎಸ್‌ಪಿ ಸೇರಿದರು.

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಅವರು ಎಲ್ಲರಿಗೂ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.

ಗುರುಸ್ವಾಮಿ ಬೂದಿತಿಟ್ಟು, ತೋಟೇಶ್ ಆಲಹಳ್ಳಿ, ಹಂದಿಪುರದ ಪುಟ್ಟಮಲ್ಲನಾಯಕ, ಮಹದೇವನಾಯಕ, ಕೊಳ್ಳೇಗಾಲ ಜಿಮ್ ರಾಜು, ಕೃಷ್ಣ, ಮುಳ್ಳೂರು ಆರ್.ಮಹದೇವ, ಸೂರಾಪುರ ನಾಗರಾಜ್ ಗೌಡ್ರು ಇತರರು ಬಿಎಸ್‌ಪಿಗೆ ಸೇರ್ಪಡೆಯಾದರು.

ನಂತರ ಮಾತನಾಡಿದ ಕೃಷ್ಣಮೂರ್ತಿ ಅವರು, ‘ಕಮಲ್ ಅವರು ಮರಳಿ ಮಾತೃ ಪಕ್ಷಕ್ಕೆ ಸೇರುವ ಮೂಲಕ ಬಿಎಸ್‌ಪಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಪಕ್ಷಕ್ಕೆ ಬರುವವರಿಗೆಲ್ಲರಿಗೂ ಮುಕ್ತ ಅವಕಾಶವಿದ್ದು ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಪಕ್ಷ ನೋಡುತ್ತದೆ’ ಎಂದರು.

ಎಸ್.ನಾಗರಾಜು ( ಕಮಲ್) ಅವರು ಮಾತನಾಡಿ, ‘ಅನ್ಯಕಾರಣದಿಂದ ಬಿಜೆಪಿ ಹೋಗಿದ್ದೆ. ಅಲ್ಲಿಯ ಉಸಿರುಗಟ್ಟಿದ ವಾತಾವರಣದಿಂದ ಹೊರಬಂದು ಬಿಎಸ್‌ಪಿಗೆ ಸೇರ್ಪಡೆಯಾಗಿರುವುದರಿಂದ ಸಂತಸವಾಗಿದೆ. ಶಾಸಕ ಎನ್.ಮಹೇಶ್ ಅವರ ಕುತಂತ್ರದಿಂದ ನಾನು ಪಕ್ಷದಿಂದ ಹೊರಗೆ ಹೋಗಬೇಕಾಯಿತು. ತಳಮಟ್ಟದಿಂದ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುವುದು’ ಎಂದರು.

ಜಿಲ್ಲಾಧ್ಯಕ್ಷ ಎನ್.ನಾಗಯ್ಯ ಮಾತನಾಡಿದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ರಾಜ್ಯ ಸಂಯೋಜಕ ಮಹದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ತಾಲ್ಲೂಕು ಅಧ್ಯಕ್ಷ ಅಮಚವಾಡಿ ಪ್ರಕಾಶ್, ಗುಂಡ್ಲುಪೇಟೆ ತಾಲ್ಲೂಕು ಉಸ್ತುವಾರಿ ಬಸವಣ್ಣ, ಉಪಾಧ್ಯಕ್ಷ ಗಗನ್ ಚಂದ್ರ, ಎಸ್.ಪಿ.ಮಹೇಶ್, ಬಾಲರಾಜ್, ಕುಮಾರ್, ಶಿವಣ್ಣ, ದೇವರಾಜ್, ಕೃಷ್ಣಸ್ವಾಮಿ, ಪುಷ್ಷ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT