ಚಾಮರಾಜನಗರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದ ಘಟನೆ ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ಶನಿವಾರ ಕರೆ ನೀಡಲಾಗಿದ್ದ ಚಾಮರಾಜನಗರ ಬಂದ್ ಯಶಸ್ವಿಯಾಯಿತು.

ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ಸದಾ ಗಿಜಿಗುಡುತ್ತಿದ್ದ ಸಣ್ಣ ಅಂಗಡಿ, ದೊಡ್ಡ ಅಂಗಡಿ ಬೀದಿಗಳು, ರಥದ ಬೀದಿ, ಹೂ, ಹಣ್ಣು, ತರಕಾರಿ ಮಾರುಕಟ್ಟೆ, ಗುಂಡ್ಲುಪೇಟೆ ಸರ್ಕಲ್, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಸಹಿತ ನಗರದ ಪ್ರಮುಖ ವಾಣಿಜ್ಯ ಸ್ಥಳಗಳು ಬಿಕೋ ಎನ್ನುತ್ತಿದ್ದವು.

ಸರ್ಕಾರಿ ಕಚೇರಿಗಳು, ಸರ್ಕಾರಿ ಶಾಲೆಗಳು, ಹಾಪ್ಕಾಮ್ಸ್, ಮೆಡಿಕಲ್ ಶಾಪ್, ಜಿಲ್ಲಾ ಆಸ್ಪತ್ರೆ, ರಾಷ್ಟ್ರೀಕೃತ ಬ್ಯಾಂಕ್ ಸಹಿತ ಅಗತ್ಯ ವಸ್ತುಗಳ ಸೇವೆಗಳು ಲಭ್ಯವಿದ್ದವು. ಕೆಲವು ಖಾಸಗಿ ಶಾಲಾ ಕಾಲೇಜುಗಳು ರಜೆ ನೀಡಿದರೆ, ಕೆಲವು ತೆರೆದಿದ್ದವು.

ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ವಿರುದ್ಧ ಶೂ ಎಸೆತ ಘಟನೆಯನ್ನು ಖಂಡಿಸಿ ಘೋಷಣೆ ಕೂಗಿದರು. ಕಾಂಗ್ರೆಸ್, ಬಿಎಸ್ಪಿ, ಎಸ್ಡಿಪಿಐ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪಚ್ಚಪ್ಪ ಸರ್ಕಲ್ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಶೋಷಿತರು, ದಮನಿತರು ಅಂಬೇಡ್ಕರ್ ನೀಡಿದ ಸಂವಿಧಾನದ ಬೆಳಕಿನಲ್ಲಿ ಸಮಾಜದಲ್ಲಿ ಸರಿಸಮನಾಗಿ ನಿಲ್ಲುತ್ತಿರುವುದನ್ನು ಸಹಿಸದ ಮನುವಾದಿಗಳು ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದಾರೆ. ಮನುವಾದದ ಸಂಚಿನ ವಿರುದ್ಧ ಸಮಾಜ ಜಾಗೃತವಾಗಿರಬೇಕು ಎಂದು ಕರೆ ನೀಡಿದರು.

‘ದೇಶದಲ್ಲಿ ಸಂವಿಧಾನ ಜಾರಿಯಾಗುವುದನ್ನು ಖಂಡಿಸಿ ಪ್ರತಿಭಟನಾ ರ್ಯಾಲಿಗಳನ್ನು ಮಾಡಿದ ಮನುವಾದಿಗಳು ಅಂದಿನಿಂದಲೂ ಸಂವಿಧಾನದ ವಿರುದ್ಧ ವಿಷ ಕಾರುತ್ತಲೇ ಬಂದಿದ್ದಾರೆ. ಸದಾ ಧರ್ಮದ ಹೆಸರಿನಲ್ಲಿ ದ್ವೇಷ ಕಾರುವ ನಾಗಪುರದ ಸರ್ಪಗಳ ಹೆಡೆಮುರಿ ಕಟ್ಟಬೇಕು’ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಸತಾನತ ಧರ್ಮದ ಹೆಸರಿನಲ್ಲಿ ಹಿಂದೂಗಳಿಗೆ ಮಂಕು ಬೂದಿ ಎರಚಿರುವ ಸನಾತನಿಗಳು ಮತ ಹಾಗೂ ಅಧಿಕಾರಕ್ಕಾಗಿ ಹಿಂದೂಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ವಾದಿಗಳ ನೆಲದಲ್ಲಿ ಮನುವಾದಿಗಳ ಅಟ್ಟಹಾಸಕ್ಕೆ ಅವಕಾಶ ನೀಡಬಾರದು ಎಂದು ಕರೆ ನೀಡಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನಿಸಿದ್ದು ದೇಶಕ್ಕೆ ಮಾಡಿರುವ ಅಪಮಾನವಾಗಿದ್ದು ಆರೋಪಿಯನ್ನು ಗಡಿಪಾರು ಮಾತ್ರವಲ್ಲ; ಮರಣ ದಂಡನೆ ವಿಧಿಸಬೇಕು. ಆದರೆ ಕೇಂದ್ರ ಸರ್ಕಾರ ಮನುವಾದಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದರು.

ಸಮಾಜದಲ್ಲಿ ಎಲ್ಲ ಧರ್ಮ, ಜಾತಿ, ವರ್ಗಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಅಂಬೇಡ್ಕರ್ ನೀಡಿದ ಸಂವಿಧಾನ ಕಾರಣವಾಗಿದೆ. ಮೀಸಲಾತಿ ಫಲ ಉಂಡವರು ಮನುವಾದವನ್ನು ಪೋಷಿಸುತ್ತಿರುವುದು ದುರಂತ ಎಂದು ಟೀಕಿಸಿದರು.

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ ‘ಮನುವಾದಿಗಳು ನ್ಯಾಯಾಂಗದ ಮೇಲೆ ದೌರ್ಜನ್ಯ ಎಸಗುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿರುವುದು ಖಂಡನೀಯ. ಸಿಜೆಐ ಮೇಲೆ ಶೂ ಎಸೆಯಲು ಮುಂದಾದ ವಕೀಲ ರಾಕೇಶ್ ಕಿಶೋರ್ನನ್ನು ಗಡಿಪಾರು ಮಾಡುವವರೆಗೂ ಹೋರಾಟ ಮುಂದುವರಿಯಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಕಾಡ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಪ್ರಸನ್ನ ಕುಮಾರ್, ರಾಮಸಮುದ್ರ ಪುಟ್ಟಸ್ವಾಮಿ, ಪುರುಷೋತ್ತಮ್, ಪು.ಶ್ರೀನಿವಾಸ ನಾಯಕ, ಉಮೇಶ್, ಸಂಘಸೇನ, ಎಸ್.ಸೋಮನಾಯಕ, ಅಬ್ರಾರ್ ಅಹಮದ್, ಎನ್.ನಾಗಯ್ಯ, ಬಾ.ಮ.ಕೃಷ್ಣಮೂರ್ತಿ, ಗಾಳಿಪುರ ಮಹೇಶ್, ದೊಡ್ಡಿಂದುವಾಡಿ ಸಿದ್ದರಾಜು, ಬಿ.ಕೆ.ರವಿಕುಮಾರ್, ಸಿ.ಎಂ.ಶಿವಣ್ಣ, ಬ್ಯಾಡಮೂಡ್ಲು ಬಸವಣ್ಣ, ಮಧುಸೂದನ್, ಚಿಕ್ಕಮಹದೇವ್, ಆರ್.ಮಹದೇವ್, ನಲ್ಲೂರು ಮಹದೇವಸ್ವಾಮಿ, ಮೋಹನ್ ನಗು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಭವನದವರೆಗೂ ಪ್ರತಿಭಟನಾ ರ್ಯಾಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ: ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ರಾಜಕೀಯ ಪಕ್ಷಗಳು, ದಲಿತ, ಪ್ರಗತಿಪರ ಸಂಘಟನೆಗಳು ಭಾಗಿ

ಪರ್ಯಾಯ ವ್ಯವಸ್ಥೆ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಬಸ್ಗಳು ಬರಲಿಲ್ಲ ಪರ್ಯಾಯವಾಗಿ ನಗರದ ಹೊರಭಾಗಗಳಿಂದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಯಿತು. ಕೊಳ್ಳೇಗಾಲ ಬೆಂಗಳೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ಸಂತೇಮರಹಳ್ಳಿ ವೃತ್ತ ಸೇತುವೆ ಹಾಗೂ ದೊಡ್ಡರಾಯಪೇಟೆ ಸರ್ಕಲ್ ಬಳಿ ಮೈಸೂರು–ನಂಜನಗೂಡು ಕಡೆಗೆ ತೆರಳುವವರಿಗೆ ಎಲ್ಐಸಿ ಸರ್ಕಲ್ ಹಾಗೂ ಸೇತುವೆ ಬಳಿ ಹಾಗೂ ಗುಂಡ್ಲುಪೇಟೆ ಕಡೆಗೆ ತೆರಳುವವರಿಗೆ ಗುಂಡ್ಲುಪೇಟೆ ಸರ್ಕಲ್ ಬಳಿ ಬಸ್ಗಳನ್ನು ನಿಲುಗಡೆ ಮಾಡಿ ಹತ್ತಿಸಿಕೊಳ್ಳಲಾಯಿತು. ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಆರಂಭವಾಗಿರುವುದರಿಂದ ಭಕ್ತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಯಿತು. ಎಂದಿನಂತೆ ಆಯಾ ಮಾರ್ಗಗಳಲ್ಲಿ ಬಸ್ಗಳು ಸಂಚರಿಸಿದವು ಎಂದು ಎಂದು ವಿಭಾಗೀಯ ನಿಯಂತ್ರಕ ಅಶೋಕ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.