ಚಾಮರಾಜನಗರ: ಚಾಮರಾಜನಗರದ ರೋಟರಿ ಸಿಲ್ಕ್ ಸಿಟಿ ವತಿಯಿಂದ ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದ ಆವರಣದಲ್ಲಿ ಡಿ.19 ರಿಂದ 21ರವರೆಗೆ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿದೆ ಎಂದು ರೋಟರಿ ವಲಯ 9ರ ಸಹಾಯಕ ಗವರ್ನರ್ ದೊಡ್ಡರಾಯಪೇಟೆ ಗಿರೀಶ್ ತಿಳಿಸಿದರು.

ನಗರದ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಆಯೋಝಿಸಿದ್ದ ಆಹಾರ ಮೇಳ ಹಾಗೂ ವಸ್ತು ಪ್ರದರ್ಶನದಿಂದ ಸಂಗ್ರಹಿಸಲಾದ ₹ 2.50 ಲಕ್ಷ ನಗದನ್ನು ತಾಲ್ಲೂಕಿನ ಗಡಿ ಭಾಗದಲ್ಲಿರುವ ಮೂಕನಪಾಳ್ಯ ಸರ್ಕಾರಿ ಶಾಲೆ ಅಭಿವೃದ್ದಿಗೆ ವ್ಯಯ ಮಾಡಲಾಗಿತ್ತು. ಈ ಬಾರಿಯ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ಹಣವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮನವಿ ಮೇರೆಗೆ ಜಿಲ್ಲೆಯ ಹಾಸ್ಟೆಲ್ಗಳಿಗೆ ಪೀಠೋಪಕರಣಗಳನ್ನು ಒದಗಿಸಲು ವ್ಯಯ ಮಾಡಲಾಗುವುದು ಎಂದು ತಿಳಿಸಿದರು.

ಶ್ರೀಮಠದ ಅವರಣದಲ್ಲಿರುವ ಬಸವರಾಜ ಸ್ವಾಮಿಗಳ ಅನುಭವ ಮಂಟಪದಲ್ಲಿ ವಸ್ತು ಪ್ರದರ್ಶನ ನಡೆಯಲಿದ್ದು ಆವರಣದಲ್ಲಿ ಆಹಾರ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಲ್ಯಾಣ ಮಂಟಪದ ಒಳಾಂಗಣದಲ್ಲಿ ಗೃಹೋಪಯೋಗಿ ವಸ್ತುಗಳ 30 ಮಳಿಗೆಗಳನ್ನು ತೆರೆಯಲಾಗುವುದು. ಕಾರ್ ಎಕ್ಸ್ಪೋ ಕೂಡ ಆಯೋಜನೆ ಮಾಡಲಾಗಿದೆ. ಆಹಾರ ಮೇಳದಲ್ಲಿ 50ಕ್ಕೂ ಹೆಚ್ಚು ಸಸ್ಯಹಾರಿ ತಿನಿಸುಗಳ ಮಳಿಗೆಗಳು ಭಾಗವಹಿಸಲಿವೆ ಎಂದರು.

ಡಿ.19ರಂದು ಬೆಳಿಗ್ಗೆ 10 ಗಂಟೆಗೆ ಸಿದ್ಧಮಲ್ಲೇಶ್ವರ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ರೋಟರಿ ಸಿಲ್ಕ್ ಸಿಟಿ ಗವರ್ನರ್ ಪಿ.ಕೆ.ರಾಮಕೃಷ್ಣ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಭಾಗವಹಿಸಲಿದ್ದಾರೆ. ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಹಿನ್ನೆಲೆ ಗಾಯಕಿ ಸಿಂಚನಾ ದೀಕ್ಷಿತ್ ಸಂಗೀತ ಸಂಜೆ, ಅಂತರರಾಷ್ಟ್ರೀಯ ಕೊಳಲು ವಾದಕ ನೀತು ನಿನಾದ್ ಕಾರ್ಯಕ್ರಮ ನಡೆಯಲಿದೆ.

20ರಂದು ಸ್ಯಾಕ್ಸೋಫೋನ್ ಕಲಾವಿದೆ ಅಂಜಲಿ ಶಾನ್ಬಾಗ್ ಹಾಗೂ ಧಮೇಂದ್ರ ಕುಮಾರ್ ಕಾರ್ಯಕ್ರಮ ಹಾಗೂ 21ರಂದು ಮಿಸ್ಟರ್ ಮ್ಯಾಜಿಕ್ ಜಾದೂ ಹಾಗೂ ಪೃಥ್ವಿ ಪಿ.ಗೌಡ ಅವರಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿದೆ. ಪ್ರವೇಶ ದರ ₹ 30 ನಿಗದಿಪಡಿಸಲಾಗಿದೆ ಎಂದು ಗಿರೀಶ್ ತಿಳಿಸಿದರು.

ಮೂರು ದಿನಗಳ ಕಾಲ ಆಹಾರ ಮೇಳ ವಸ್ತು ಪ್ರದರ್ಶನದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಶಮಿತ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಹಾರ ಮೇಳದ ಚೇರ್ಮನ್ ಡಿ.ಪಿ.ವಿಶ್ವಾಸ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಹೊಸೂರು ಶಮಿತ್ ಕುಮಾರ್, ಕಾರ್ಯದರ್ಶಿ ಸಂತೋಷ್, ಮಾಜಿ ಅಧ್ಯಕ್ಷ ಮರಿಯಾಲದ ಸೌರಭ ಮುರುಘೇಂದ್ರ ಸ್ವಾಮಿ, ಅಜಯ್, ಶರತ್, ವಿಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.