ಭಾನುವಾರ, ಏಪ್ರಿಲ್ 11, 2021
31 °C

ಮಾದಪ್ಪನಿಗೆ ಬೆಳ್ಳಿ‌ ಕಣ್ಣು ಕಾಣಿಕೆ ನೀಡಿದ ಎಸ್.ಎಂ.ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರು  ಮಹದೇಶ್ವರ ಬೆಟ್ಟದ ಮಲೆ‌ಮಹದೇಶ್ವರ ಸ್ವಾಮಿಗೆ 1.110 ಕೆಜಿ ತೂಕದ ಬೆಳ್ಳಿಯ ಮೂರು ಕಣ್ಣುಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. 

ಅವರು ಭಕ್ತರೊಬ್ಬರ ಮೂಲಕ ಶುಕ್ರವಾರ ಕಾಣಿಕೆಯನ್ನು ದೇವಾಲಯಕ್ಕೆ‌ ಅರ್ಪಿಸಿದ್ದಾರೆ. 

ಶನಿವಾರ ಮಲೆ‌ಮಹದೇಶ್ವರ ಸ್ವಾಮಿಗೆ ಬೆಳ್ಳಿ ಕಣ್ಣನ್ನು ಧಾರಣೆ ಮಾಡಿ ಪೂಜೆ‌ ಸಲ್ಲಿಸಲಾಯಿತು.

ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಶನಿವಾರ ಬೆಂಗಳೂರಿನಲ್ಲಿ ಕೃಷ್ಣ ಅವರನ್ನು ಭೇಟಿ ಮಾಡಿ ಅಭಿನಂದನೆ ಪತ್ರ ನೀಡಿದ್ದಾರೆ.

ಮಲೆ ಮಹದೇಶ್ವರ ಸ್ವಾಮಿಯು ಎಸ್.ಎಂ.ಕೃಷ್ಣ ಅವರ ಮನೆ ದೇವರಾಗಿದ್ದು, ಮುಖ್ಯಮಂತ್ರಿಯಾಗಿದ್ದಾಗ ಬೆಟ್ಟದಲ್ಲಿ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿದ್ದರು.

ಇತ್ತೀಚೆಗೆ ನಡೆದ ಮೊಮ್ಮಗನ ಮದುವೆ ಬಳಿಕ ಈಗ ಬೆಳ್ಳಿ ಕಣ್ಣಿನ ಕಾಣಿಕೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು