‘ಸರ್ವಧರ್ಮೀಯರೂ ಭಾಗವಹಿಸಿ’ ಡಿ.24ರಂದು ರಾತ್ರಿ 11ರಿಂದ 11.45ರವರೆಗೆ ಭಜನೆ ನಂತರ ಬಲಿ ಪೂಜೆ ನಡೆಯಲಿದೆ. ಹಬ್ಬದ ದಿನ 25ರಂದು ಬೆಳಿಗ್ಗೆ 8ಕ್ಕೆ ನಡೆಯುವ ವಿಶೇಷ ಬಲಿಪೂಜೆಯಲ್ಲಿ ಸಹಸ್ರಾರು ಕ್ರಿಶ್ಚಿಯನ್ನರು ಕುಟುಂಬ ಸಮೇತ ಭಾಗವಹಿಸಿ ಯೇಸುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕೇಕ್ ಹಂಚಿ ಪರಸ್ಪರ ಶುಭಾಶಯ ವಿನಿಯಮ ನಡೆಯಲಿದೆ.
ಫಾದರ್ ಸಿ.ಅಂತೋನಪ್ಪ ಚಾಮರಾಜನಗರ ವಲಯದ ಶ್ರೇಷ್ಠ ಧರ್ಮಗುರು
‘ಮಕ್ಕಳ ಅಸಮಾನತೆ ನೀಗಲು ಪ್ರಾರ್ಥನೆ’ ಹನೂರು ತಾಲ್ಲೂಕಿನ ಮಾರ್ಟಳ್ಳಿ ಧರ್ಮಕೇಂದ್ರದಲ್ಲಿ ಕ್ರಿಸ್ತನ ಜಯಂತಿ ಉತ್ಸವವನ್ನು ಎಲ್ಲ ಧರ್ಮೀಯರು ಒಗ್ಗಟ್ಟಾಗಿ ಆಚರಿಸುವುದು ವಿಶೇಷ. ಶಾಂತಿ ಪ್ರೀತಿ ಹಂಚುವ ಹಬ್ಬದ ದಿನ ಮಕ್ಕಳ ಮಧ್ಯದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ ನೆಮ್ಮದಿಯಿಂದ ಬದುಕಲು ಯೇಸುಕ್ರಿಸ್ತನ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು.
–ಫಾದರ್ ಡಾ.ಎಂ.ವಿನ್ಸೆಂಟ್ ಮಾರ್ಟಳ್ಳಿ
ಧರ್ಮಕೇಂದ್ರದ ಗುರು ‘ಪ್ರೀತಿ ಶಾಂತಿಯೇ ಮಂತ್ರ’ ಕ್ರಿಸ್‌ಮಸ್ ಹಬ್ಬದ ವಿಶೇಷತೆಯೇ ಪ್ರೀತಿ ಶಾಂತಿ ಹಂಚಿ ಇತರರಿಗೆ ಸಹಾಯ ಮಾಡುವುದಾಗಿದೆ. ಹಾಗಾಗಿ ಹಬ್ಬದಲ್ಲಿ ಬಡವರಿಗೆ ದಾನ ಧರ್ಮ ಮಾಡಲಾಗುವುದು. ವಿಶ್ವಶಾಂತಿಗೆ ಸೈನಿಕರ ಹಾಗೂ ನಾಗರಿಕರ ಶ್ರೇಯಸ್ಸಿಗೆ ವಿಶೇಷ ಪ್ರಾರ್ಥನೆ ನಡೆಯಲಿದೆ. ಹಬ್ಬದ ಸಂದರ್ಭ ಪ್ರತಿನಿತ್ಯ ಹಗಲು ರಾತ್ರಿ ಕ್ರಿಸ್ತನಲ್ಲಿ ಪ್ರಾರ್ಥನೆ ಮಾಡಲಾಗುವುದು.
–ರೆ.ಜೋಶುವಾ ಪ್ರಸನ್ನ ಕುಮಾರ್ ಬೇತೆಲ್ ಲೂಥರನ್ ಚರ್ಚ್ ಸಭಾ ಪಾಲಕ
ಮಾರ್ಟಳ್ಳಿಯಲ್ಲಿ ಸಂಭ್ರಮ ಮಾರ್ಟಳ್ಳಿ ಭಾಗದಲ್ಲಿ ಕ್ರೈಸ್ತರು ಹೆಚ್ಚಾಗಿರುವುದರಿಂದ ಕ್ರಿಸ್ ಮಸ್ ಹಬ್ಬದ ಸಂಭ್ರಮ ಹೆಚ್ಚಾಗಿರುತ್ತದೆ. ಬಡವರು ಹಾಗೂ ನಿರ್ಗತಿಕ ಜನರಿಗೆ ಸಹಾಯ ಮಾಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.