ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಗೆದ್ದವರ ಕಥೆಗಳು | ರೋಗವೇ ಅಲ್ಲ, ಜ್ವರ ಎಲ್ಲರಿಗೂ ಬರಲ್ಲ

Last Updated 28 ಜುಲೈ 2020, 14:08 IST
ಅಕ್ಷರ ಗಾತ್ರ

‌ಯಳಂದೂರು: ಕೋವಿಡ್‌–19ಗೆ ತುತ್ತಾಗಿ ಗುಣಮುಖರಾಗಿ ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವನಗು ಮಗು ಆ್ಯಂಬುಲೆನ್ಸ್‌ ‌ಚಾಲಕ ಹೊನ್ನೂರು ಮರಿಸ್ವಾಮಿ ಅವರು ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಕೊರೊನಾ ದೃಢಪಟ್ಟಿದೆ ಎಂದ ತಕ್ಷಣ ಒತ್ತಡಕ್ಕೆ ಒಳಗಾಗುವುದು ಬೇಡ. ಮುಂದೆ ಏನು ಮಾಡಬೇಕು?ಯಾವ ರೀತಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿದುಕೊಂಡರೆ ಅರ್ಧ ರೋಗವಾಸಿಯಾದಂತೆ. ಕೋವಿಡ್‌ ಆಸ್ಪತ್ರೆಗೆ ಹೋಗುವ ಕರೆ ಬರುತ್ತಲೇ ಧೈರ್ಯ, ಆತ್ಮವಿಶ್ವಾಸ ಮತ್ತು ಲವಲವಿಕೆಯ ಜೀವನ ಶೈಲಿಯಿಂದ ಹೊರಡುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು.

ಕೋವಿಡ್‌–19 ಹೊಸ ವ್ಯಾಧಿ. ಹಾಗಾಗಿ, ಇದಕ್ಕೆ ಚುಚ್ಚುಮದ್ದು, ಮಾತ್ರೆ ಎಂದು ಮೂರು ಹೊತ್ತು ತಿನ್ನಬೇಕಾಗುತ್ತದೆ ಎಂಬ ಭಯ ಬೇಡ. ಸಣ್ಣ ಜ್ವರದಿಂದ ಆರಂಭಗೊಳ್ಳುವ ಈ ಕಾಯಿಲೆ, ಸತ್ವಹಿತ ಆಹಾರ ಸೇವನೆಯಿಂದದೇಹ ಬಿಟ್ಟು ಹೋಗುತ್ತದೆ.

ಕೋವಿಡ್‌ ಬಂದ ಸಂದರ್ಭದಲ್ಲಿ ಸೋಂಕು ತಗುಲಿದವರು ಮತ್ತು ಅವರ ಕುಟುಂಬದವರಿಗೆ ಧೈರ್ಯಹೇಳಿದರೆ ಸಾಕು. ಅನಗತ್ಯ ಭೀತಿ, ವದಂತಿಗಳಿಗೆ ಕಿವಿಗೊಡಬಾರದು. ಕ್ವಾರಂಟೈನ್ ಎಂಬುದು ಶಿಕ್ಷೆ ಎಂದು ಭಾವಿಸಬೇಕಾಗಿಲ್ಲ. ಇದು ದೇಹ ರೋಗಾಣು ವಿರುದ್ಧ ಹೋರಾಡಲುಪ್ರತಿಕಾಯಗಳನ್ನು ಸೃಷ್ಟಿಸುವ ಸಮಯ ಎಂಬುದನ್ನು ಅರಿತರೆ ಸಾಕು.

ತಂದೆ–ತಾಯಿ, ಕುಟುಂಬದವರ ಪ್ರೋತ್ಸಾಹ, ಹಿತೈಷಿಗಳ ಒಳ್ಳೆಯ ಮಾತುಗಳಿಂದಲೇ ಕಾಯಿಲೆಯನ್ನುಜಯಿಸಬಹುದು. ಬಿಸಿನೀರು, ಬಿಸಿಬಿಸಿ ಆಹಾರ ಸೇವಿಸುತ್ತಿದ್ದರೆ, ರೋಗದ ಲವಲೇಶವೂ ಹತ್ತಿರಸುಳಿಯುವುದಿಲ್ಲ. ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಸಹಪಾಠಿಗಳ ಗೆಳತನ ಹೆಚ್ಚಾಗುತ್ತದೆ. ಸಂತಸ ಮತ್ತು ಸಂಭ್ರಮಗಳಿಂದ ದಿನ ಕಳೆದದ್ದೇ ತಿಳಿಯುವುದಿಲ್ಲ.

ಕೊರೊನಾ ಜ್ವರ ಸಂಬಂಧಿ ಸೋಂಕು. ಇದು ಹರಡುವ ಮೊದಲು, ಬಾರದಂತೆ ಎಚ್ಚರ ವಹಿಸಬೇಕು. ವೈಯಕ್ತಿಕ ಅಂತರ, ಮುಖಗವಸು, ಸೋಪಿನ ನೀರಿನಿಂದ ಕೈ ತೊಳೆಯುವುದನ್ನು ಮಾಡಬೇಕು.

ಅನೀರಿಕ್ಷಿತ ಅವಘಡಗಳು ಬಂದಾಗ ಸಮಾಧಾನದಿಂದ ಕಾಣಬೇಕು. ಇಲ್ಲ ಸಲ್ಲದ ಆರೋಪ ಮಾಡಬಾರದು.ಮನೆ ಮಂದಿಯನ್ನು, ಮನೆಯ ಹೊರಾಂಗಣವನ್ನು ನಿರ್ಬಂಧಿಸುವುದನ್ನು ತಪ್ಪಿಸಬೇಕು.

ಜನ ಸಮುದಾಯ ಕೊರೊನಾ ಪೀಡಿತರನ್ನು ಕಂಡಾಗ ಸಮಾನತೆಯಿಂದ ಕಾಣುವಂತೆ ಆಗಬೇಕು.ಗೆಳೆಯರು ಸೋಂಕಿತರಿಗೆ ಒಳ್ಳೆಯ ಪುಸ್ತಕಗಳನ್ನು ನೀಡಿ. ಆಪತ್ತಿನಲ್ಲಿ ಮಹಾತ್ಮರ ಕಾಯಕಹೇಗಿತ್ತು ಎಂಬುದನ್ನು ಅರಿಯಿರಿ. ದೃಶ್ಯ ಮಾಧ್ಯಮಗಳ ವರದಿಗಳನ್ನು ನೋಡಬೇಡಿ, ಆ ವಿಡಿಯೊಗಳನ್ನು ಯಾರಿಗೂ ಕಳುಹಿಸಲೇ ಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT