ಬುಧವಾರ, ಮಾರ್ಚ್ 29, 2023
32 °C

ದೀಪಾವಳಿ: ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಬುಧವಾರ ದೀಪಾವಳಿ ಹಬ್ಬದ ಆಚರಣೆ ಸಾಂಪ್ರದಾಯಿಕವಾಗಿ ಆರಂಭವಾಗಿದ್ದು, ಮೊದಲ ದಿನ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ಎಣ್ಣೆ ಮಜ್ಜನ ಸೇವೆಯ ಅಂಗವಾಗಿ ದೇವಾಲಯವದ ಒಳಾಂಗಣ ಹಾಗೂ ಹೊರಾಂಗಣವನ್ನು ಫಲಪುಷ್ಪಗಳಿಂದ ಶೃಂಗರಿಸಲಾಗಿತ್ತು. 

ಪವಾಡ ಪುರುಷನಿಗೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಪೂಜೆ ಆರಂಭವಾಯಿತು. ಪುಷ್ಪಾರ್ಚನೆ, ಅಭಿಷೇಕ ಸೇವೆಗಳು ನಡೆದು ಮಹಾಮಂಗಳಾರತಿ ನೆರವೇರಿಸಲಾಯಿತು. 

‌ಗುರುವಾರ ನಡೆಯಲಿರುವ ಹಾಲರವೆ ಉತ್ಸವಕ್ಕಾಗಿ ಬುಧವಾರ ಮಧ್ಯಾಹ್ನದಿಂದ ಭಕ್ತರಿಗೆ ಪ್ರವೇಶ ನಿರ್ಬಂಧಿಸಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಮಧ್ಯಾಹ್ನ 2 ಗಂಟೆಯ ಒಳಗಾಗಿ ಸ್ವಾಮಿಯ ದರ್ಶನ ಪಡೆದರು. 

ಮಧ್ಯಾಹ್ನ 12 ರಿಂದ 2 ಗಂಟೆ ನಡುವಿನ ಅವಧಿಯಲ್ಲಿ ಎಣ್ಣೆ ಮಜ್ಜನದ ವಿಶೇಷ ಪೂಜೆ, ರುದ್ರಾಭಿಷೇಕ, ವಿವಿಧ ಪುನಸ್ಕಾರ ನಡೆದು ಮಹಾಮಂಗಳಾರತಿ ನೆರವೇರಿತು. ಸಂಜೆಯ ಹೊತ್ತಿಗೂ ದೇವಾಲಯದಲ್ಲಿ ಭಕ್ತರು ಇದ್ದರು. ಆದರೆ, ಸಂಖ್ಯೆ ತುಂಬಾ ಕಡಿಮೆ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು