ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ದಾಸಿಮಯ್ಯ ತತ್ವಾದರ್ಶ ಪಾಲನೆ ಮಾಡಿ: ಪುಟ್ಟರಂಗಶೆಟ್ಟಿ

Last Updated 26 ಮಾರ್ಚ್ 2023, 16:33 IST
ಅಕ್ಷರ ಗಾತ್ರ

ಚಾಮರಾಜನಗರ: 'ದೇವರ ದಾಸಿಮಯ್ಯ ಅವರು ವಚನ ಕ್ರಾಂತಿ ಮಾಡಿದವರು. ಅವರ ತತ್ವ ಮತ್ತು ಆದರ್ಶ ಪಾಲನೆ ಮಾಡಿದಾಗ ಮಾತ್ರ ಅವರ ಜಯಂತಿಗೆ ಅರ್ಥ ಬರುತ್ತದೆ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾನುವಾರ ತಿಳಿಸಿದರು.

ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಟ್ಟು 380 ಜಾತಿಗಳು ಇದ್ದು, ಜಾತ್ಯತೀತತೆ ತೊಳಲಾಡುತ್ತಿದೆ. ಒಂದು ಜನಾಂಗ ರಾಜಕೀಯವಾಗಿ ಮೇಲೆ ಬರದೆ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ತಿಳಿಸಿದರು.

ಬಿಜೆಪಿ ಮುಖಂಡ ಎಂ.ರಾಮಚಂದ್ರ ಮಾತನಾಡಿ, ‘ದೇವರ ದಾಸಿಮಯ್ಯ ಅವರ ಅದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅದರ್ಶವಾಗಿಟ್ಟುಕೊಳ್ಳಬೇಕು. ಬೇರೆ ಕೈಗಾರಿಕೆಗಳ ಪೈಪೋಟಿಯಿಂದ ನಿಮ್ಮ ವೃತ್ತಿಗೆ ಹಿನ್ನಡೆಯಾಗಿದೆ. ಆದ್ದರಿಂದ ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸೀರೆ ನೇಯ್ಗೆಯಂತಹ ತಮ್ಮ ವೃತ್ತಿಯನ್ನು ಬೆಳೆಸುವ ಕಾರ್ಯ ಆಗಬೇಕು’ ಎಂದು ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ‘ಜಯಂತಿ ಕಾರ್ಯಕ್ರಮಗಳು ಸಮುದಾಯದ ಶಕ್ತಿ ತೋರಿಸುತ್ತದೆ. ದೇವರ ದಾಸಿಮಯ್ಯ ಬಗ್ಗೆ ಅನೇಕ ಸಂಶೋಧನೆಗಳು ನಡೆಯುತ್ತಿದ್ದು, ಅದರ ಮೂಲಕ ಸಮಾಜ ಎತ್ತುವ ಕೆಲಸ ಆಗುತ್ತಿದೆ’ ಎಂದರು.

ಜನಾಂಗದ ಮುಖಂಡರಾದ ವೆಂಕಟೇಶ್, ಲಕ್ಷ್ಮೀಕಾಂತ್, ಲಿಂಗರಾಜು, ರಂಗಶೆಟ್ಟಿ, ಬಸವರಾಜು, ಗೋವಿಂದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT