ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪಾನೀಯ ಘಟಕ ಸ್ಥಾಪನೆ, ಕ್ರಿಕೆಟಿಗ ಮುರಳೀಧರನ್‌ ₹400 ಕೋಟಿ ಹೂಡಿಕೆ

Published 16 ಆಗಸ್ಟ್ 2023, 6:30 IST
Last Updated 16 ಆಗಸ್ಟ್ 2023, 6:30 IST
ಅಕ್ಷರ ಗಾತ್ರ

ಚಾಮರಾಜನಗರ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಅವರು ಜಿಲ್ಲೆಯಲ್ಲಿ ಬೃಹತ್‌ ಉದ್ಯಮವೊಂದನ್ನು ಸ್ಥಾಪಿಸುತ್ತಿದ್ದು, ₹400 ಕೋಟಿ ಬಂಡವಾಳ ಹೂಡುತ್ತಿದ್ದಾರೆ. 

ತಾಲ್ಲೂಕಿನ ಕೆಲ್ಲಂಬಳ್ಳಿ, ಬದನಗುಪ್ಪೆ ಕೈಗಾರಿಕಾ ಪ್ರದೇಶದ 46 ಎಕರೆ ಪ್ರದೇಶದಲ್ಲಿ ಪಾನೀಯ ತಯಾರಿಕಾ ಘಟಕವನ್ನು ಆರಂಭಿಸುತ್ತಿದ್ದಾರೆ. ಅದರಿಂದಾಗಿ 800 ಮಂದಿಗೆ ಉದ್ಯೋಗ ಸಿಗಲಿದೆ.   

ಆರು ತಿಂಗಳ ಹಿಂದೆಯೇ ಅವರು ಜಮೀನು ಖರೀದಿಸಿದ್ದು, ರಾಜ್ಯಮಟ್ಟದಲ್ಲೇ ಯೋಜನೆಗೆ ಅನುಮತಿ ಸಿಕ್ಕಿದೆ. ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಎಂ/ಎಸ್‌ ಮುತ್ತಯ್ಯ ಬೆವರೇಜ್‌ ಅಂಡ್‌ ಕನ್‌ಫೆಕ್ಷನರಿ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಕಾರ್ಖಾನೆ ಸ್ಥಾಪಿಸುತ್ತಿದ್ದು, ಅದು ತಂಪು ಪಾನೀಯ ಘಟಕ ಎಂದು ಕೈಗಾರಿಕಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

‘ದೊಡ್ಡ ಪ್ರಮಾಣದ ಉದ್ದಿಮೆಯಾಗಿರುವುದರಿಂದ ರಾಜ್ಯ ಮಟ್ಟದಲ್ಲಿಯೇ ಭೂಮಿ ಹಂಚಿಕೆ ಸೇರಿದಂತೆ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅವರು ಜಿಲ್ಲೆಗೆ ಭೇಟಿ ಕೊಟ್ಟಿಲ್ಲ. ಆದರೆ, ಬೆಂಗಳೂರಿನ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಅವರ ತಂಡದ ಸದಸ್ಯರು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಕೈಗಾರಿಕೆ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್‌ ಮಾಹಿತಿ ನೀಡಿದರು. 

‘ಕೈಗಾರಿಕೆಗಳು ಹೆಚ್ಚು ಬಂದಷ್ಟೂ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುತ್ತದೆ. ಈ ಘಟಕದಿಂದ ಕನಿಷ್ಠ 800 ಮಂದಿಗೆ ಕೆಲಸ ಸಿಗಲಿದೆ. ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಒಂಬತ್ತು– ಹತ್ತು ತಿಂಗಳಲ್ಲಿ ಕಾರ್ಖಾನೆ ಆರಂಭವಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಮುತ್ತಯ್ಯ ಮುರಳೀಧರನ್‌ ಅವರು ಸ್ಥಾಪಿಸಲು ಹೊರಟಿರುವ ಕಂಪನಿ
ಮುತ್ತಯ್ಯ ಮುರಳೀಧರನ್‌ ಅವರು ಸ್ಥಾಪಿಸಲು ಹೊರಟಿರುವ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT