ಶುಕ್ರವಾರ, ಮೇ 14, 2021
32 °C

ಚಾಮರಾಜನಗರ: 469 ಪ್ರಕರಣ ದೃಢ, ಎಂಟು ಸಾವು, 308 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 537 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಆದರೆ, 68 ಪ್ರಕರಣಗಳನ್ನು ಪತ್ತೆ ಹಚ್ಚಬೇಕಾಗಿರುವುದರಿಂದ, ಜಿಲ್ಲಾಡಳಿತ ನೀಡಿರುವ ವರದಿಯಲ್ಲಿ ಹೊಸ ಪ್ರಕರಣಗಳನ್ನು 469 ಎಂದು ತೋರಿಸಲಾಗಿದೆ. ಎಂಟು ಮಂದಿ ಮೃತಪಟ್ಟಿದ್ದಾರೆ. 308 ಮಂದಿ ಗುಣಮುಖರಾಗಿದ್ದಾರೆ. 

ಸಕ್ರಿಯ ಪ್ರಕರಣಗಳ ಸಂಖ್ಯೆ 2,596ಕ್ಕೆ ಏರಿದೆ. ಈ ಪೈಕಿ 1,715 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಭಾನುವಾರ 300 ಮಂದಿಯನ್ನು ಹೋಂ ಐಸೊಲೇಷನ್‌ಗೆ ಕಳುಹಿಸಲಾಗಿದೆ.

ಭಾನುವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 11,859ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 9,000 ದಾಟಿದ್ದು, 9,084 ಮಂದಿ ಸೋಂಕು ಮುಕ್ತರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 159ಕ್ಕೆ ತಲುಪಿದೆ.

ಯುವಕರೇ ಹೆಚ್ಚು: ಗುಂಡ್ಲುಪೇಟೆ ತಾಲ್ಲೂಕು ಚಂಗವಾಡಿ ಗ್ರಾಮದ 39 ವರ್ಷದ ವ್ಯಕ್ತಿ, ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಗ್ರಾಮದ 52 ವರ್ಷದ ಮಹಿಳೆ, ನಲ್ಲೂರುಮೋಳೆ ಗ್ರಾಮದ 70 ವರ್ಷದ ವೃದ್ಧ, ಅರಳೀಪುರ ಗ್ರಾಮದ 34 ವರ್ಷದ ಯುವಕ, ದೇಶಿಗೌಡನಪುರ ಗ್ರಾಮದ 35 ವರ್ಷದ ಯುವಕ, ಚಾಮರಾಜನಗರದ 36 ವರ್ಷದ ಯುವಕ, ಹನೂರು ತಾಲ್ಲೂಕಿನ ರಾಮಾಪುರದ 34 ವರ್ಷದ ಯುವಕ ಮತ್ತು ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮದ 56 ವರ್ಷದ ಪುರುಷ ಮೃತಪಟ್ಟವರು.

ಭಾನುವಾರ 1,843 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,306 ವರದಿಗಳು ನೆಗೆಟಿವ್‌ ಬಂದಿವೆ. 537 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 68 ಪ್ರಕರಣಗಳನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. 

ತಾಲ್ಲೂಕುವಾರು: 469 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 176, ಗುಂಡ್ಲುಪೇಟೆಯಲ್ಲಿ 126, ಕೊಳ್ಳೇಗಾಲದಲ್ಲಿ 78, ಹನೂರು ತಾಲ್ಲೂಕಿನಲ್ಲಿ 52 ಮತ್ತು ಯಳಂದೂರಿನಲ್ಲಿ 32 ಪ್ರಕರಣಗಳು ವರದಿಯಾಗಿವೆ. ಸೋಂಕಿತರಲ್ಲಿ ಐವರು ಹೊರ ಜಿಲ್ಲೆಯವರಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು