ಚಾಮರಾಜನಗರ: ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬುದ್ಧ ವಿಹಾರದಲ್ಲಿ ಸೋಮವಾರ ನಡೆದ ವೈಶಾಖ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ನಾಲ್ವರು ಮಕ್ಕಳು ಸೇರಿದಂತೆ 14 ಮಂದಿ ಬೌದ್ಧಧಮ್ಮ ಸ್ವೀಕರಿಸಿದರು.

ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ನಡೆದ 2566ನೇ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಬುದ್ಧನ ಬೋಧನೆಗಳು ಮತ್ತು ಬೌದ್ಧ ಧರ್ಮವನ್ನು ಒಪ್ಪಿಕೊಂಡುಮಹಾನಾಯಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ವಕೀಲ ಪ್ರಸನ್ನಕುಮಾರ್ ಮತ್ತು ಕುಟುಂಬ ವರ್ಗ,ಕಾಗಲವಾಡಿ ಡಾ.ಶಿವಕುಮಾರ್, ಕರಿನಂಜನಪುರ ಮಹದೇವಯ್ಯ, ಚಾಮರಾಜನಗರ ಮಣಿಕಂಠ ಹಾಗೂ ಕುಟುಂಬ ವರ್ಗ, ದಡದಹಳ್ಳಿ ಶಂಕರ್ ಬೌದ್ಧಧಮ್ಮ ದೀಕ್ಷೆ ಪಡೆದರು.

ಬೌದ್ಧದೀಕ್ಷಾ ಕಾರ್ಯಕ್ರಮ, ಬೌದ್ಧ ಪಠಣ, ಧ್ಯಾನ ಮತ್ತು ಪ್ರವಚನ ನಡೆಸಿಕೊಟ್ಟ ನಾಗಪುರ ಭಂತೇ ತಿಸ್ಸಾ ‘ಪಂಚಶೀಲ ತತ್ವ ಪಾಲಿಸಿ’ ಎಂದರು.

ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಅಧ್ಯಕ್ಷ ಆರ್.ಬಸವರಾಜು, ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ವಿವಿಧ ಸಮುದಾಯಗಳ ಬೌದ್ಧ ಉಪಾಸಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.