ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟೀಯ ಸಿರಿಧಾನ್ಯ ವರ್ಷದ ಆಚರಣೆ: ದೋಸೆ, ಪಾಯಸಕ್ಕೆ ಮುಗಿಬಿದ್ದ ನಾರಿಯರು!

ಗುಂಬಳ್ಳಿ: ಸಿರಿ ಧಾನ್ಯ ಪಾಕ ಸ್ಪರ್ಧೆ: ತಿಂಡಿಗಳ ಘಮಲು
Published 5 ಆಗಸ್ಟ್ 2023, 13:43 IST
Last Updated 5 ಆಗಸ್ಟ್ 2023, 13:43 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಅಂತರರಾಷ್ಟೀಯ ಸಿರಿಧಾನ್ಯ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಐಸಿಎಆರ್ ಹಾಗೂ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಎರಡನೇ ‘ಸಿರಿಧಾನ್ಯಗಳ ಪಾಕ ಸ್ಪರ್ಧೆ’ ಈಚೆಗೆ ಆಯೋಜಿಸಿತ್ತು.

ಬೇಸಾಯ ಶಾಸ್ತ್ರಜ್ಞೆ ಡಾ. ಶೃತಿ ಮಾತನಾಡಿ, ‘ಜಿಲ್ಲೆ ಕಿರುಧಾನ್ಯ ಬೆಳೆಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಬರ ಮತ್ತು ವಿಷಮ ಪರಿಸ್ಥಿತಿಯಲ್ಲೂ ಆಹಾರ ಮತ್ತು ಮೇವು ನೀಡುತ್ತದೆ. ಉತ್ತಮ ಪೌಷ್ಟಿಕ ಆಹಾರವಾಗಿ ಗುರುತಿಸಲಾಗಿದೆ. ರೈತರು ಇಂತಹ ಬೆಳೆ ಪದ್ಧತಿಯನ್ನು ನಿರ್ಲಕ್ಷಿಸಿದ್ದಾರೆ. ಆದರೆ, ಪರಂಪರೆಯಿಂದ ಬಂದ ನವಣೆ, ಹಾರಕ, ಸಜ್ಜೆ ಬೆಳೆಗಳನ್ನು ಉಳಿಸಲು ಅರಿವು ಮೂಡಿಸಬೇಕಿದೆ’ ಎಂದರು.

ವಿಜ್ಞಾನಿ ಡಾ.ದೀಪಾ ‘ಸಿರಿಧಾನ್ಯಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿವೆ. ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಬಗ್ಗೆ ತಿಳಿದುಕೊಂಡರೆ, ಸುಲಭವಾಗಿ ಕೃಷಿ ಮಾಡಬಹುದು. ಸಿರಿಧಾನ್ಯ ಸೇವನೆಯಿಂದ ಮಧುಮೇಹಿ, ಸ್ಥೂಲ ಕಾಯ ಮತ್ತಿತ್ತರ ವಂಶವಾಹಿ ರೋಗಗಳಿಂದ ದೂರ ಇರಬಹುದು’ ಎಂದು ವಿವರಿಸಿದರು.

ನಿಪ್ಪಟ್ಟು, ನವಣೆ ದೋಸೆ, ಇಡ್ಲಿ, ಸಜ್ಜೆ ಪಾಯಸ, ತಂಬಿಟ್ಟು, ರಾಗಿ ಲಡ್ಡು, ನವಣೆ ದೋಸೆ ಸೇವಿಸಲು ಮಹಿಳೆಯರು ಮುಗಿಬಿದ್ದರು. ಸಿರಿಧಾನ್ಯ ಆಹಾರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಿರಿಧಾನ್ಯಗಳ ವಸ್ತು ಪ್ರದರ್ಶನ ಗಮನ ಸೆಳೆಯಿತು.

ಡಾ. ಶೃತಿ, ಸುಪ್ರಿಯಾ, ಮುಖ್ಯ ಶಿಕ್ಷಕರಾದ ಕೆ.ಪುಟ್ಟರಾಜಮ್ಮ, ಮಹದೇವಮ್ಮ, ರೈತ ಮಹಿಳೆಯರು ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT