ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಯ ಈಡಿಗ ಸಮಾವೇಶ: 250ಕ್ಕೂ ಹೆಚ್ಚು ಮಂದಿ ಭಾಗಿ’

Published 8 ಡಿಸೆಂಬರ್ 2023, 16:17 IST
Last Updated 8 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಡಿ.10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಆರ್ಯ ಈಡಿಗ ಬೃಹತ್ ಜಾಗೃತ ಸಮಾವೇಶಕ್ಕೆ ತಾಲ್ಲೂಕಿನಿಂದ ಸುಮಾರು 250ಕ್ಕು ಹೆಚ್ಚು ಮಂದಿ ತೆರಳಲಿದ್ದಾರೆ ಎಂದು ರೇಣುಕಾಂಬ ಆರ್ಯ ಈಡಿಗ ಸಂಘದ ತಾಲ್ಲೂಕು ಅಧ್ಯಕ್ಷ ಗೋಪಾಲಸ್ವಾಮಿ ತಿಳಿಸಿದರು.

ಬೇಗೂರು ಗ್ರಾಮದ ಆರ್ಯ ಈಡಿಗ ಸಮುದಾಯ ಭವನದ ಆವರಣದಲ್ಲಿ ಸಮಾವೇಶದ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಕರ್ನಾಟಕ ಆರ್ಯ ಈಡಿಗ ಸಂಘವು ಸ್ಥಾಪನೆಯಾಗಿ 78 ವರ್ಷ ತುಂಬಿದ್ದು,  25 ಈಡಿಗ ಉಪ ಪಂಗಡಗಳನ್ನು ಒಟ್ಟುಗೂಡಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದರು.

ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಈಡಿಗ ಜನಾಂಗದ ರಾಜಕೀಯ ಪ್ರಮುಖರು, ಚಲನಚಿತ್ರ ನಟರು, ಮುಖಂಡರು ಹಾಗೂ ಈಡಿಗ ಸಂಘಟನೆಗಳು ಸೇರಿ ಸರ್ಕಾರಕ್ಕೆ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರೇಣುಕಾಂಬ ಆರ್ಯ ಈಡಿಗ ಸಂಘದ ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಚಂದ್ರು.ಪಿ, ಮುಖಂಡರಾದ ಲೋಕೇಶ್, ಕೇಬಲ್ ಶ್ರೀನಿವಾಸ್, ವೆಂಕಟೇಶ್, ಬೆಟ್ಟದಮಾದಹಳ್ಳಿ ನಂಜುಂಡಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT