ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನ ಬೆಟ್ಟದಲ್ಲಿ ಭರ್ಜರಿ ಮಳೆ

Published 21 ಮೇ 2023, 11:37 IST
Last Updated 21 ಮೇ 2023, 11:37 IST
ಅಕ್ಷರ ಗಾತ್ರ

ಯಳಂದೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಭಾನುವಾರ ಸಂಜೆ ಬಿರುಸಿನ ಮಳೆಯಾಗಿದೆ.

ಕಳೆದೊಂದು ವಾರದಿಂದ ಬಿಸಿಲಿನಿಂದ ಪರಿತಪಿಸಿದ್ದ ಜನರು ಕೊಂಚ ನಿರಾಳರಾಗುವಂತಾಗಿದೆ.

ಶನಿವಾರ ರಾತ್ರಿಯೇ ಮಳೆ ಬರುವ ನಿರೀಕ್ಷೆ ಇತ್ತು. ಗುಡುಗು ಮಿಂಚಿನ ಅಬ್ಬರ ಇದ್ದರೂ ಮಳೆ ಬಂದಿರಲಿಲ್ಲ.

ಭಾನುವಾರ ಬೆಳಿಗ್ಗೆಯಿಂದಲೇ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಇತ್ತು.

ಸಂಜೆ ಸುರಿದ ಮಳೆ ಬೆಟ್ಟಕ್ಕೆ ತಂಪು ತುಂಬಿದೆ. ಭಕ್ತರು ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಮೊರೆ ಹೋದರು.

ತಾಲ್ಲೂಕಿನ ಸುತ್ತಮುತ್ತ ಮೋಡದ ವಾತಾವರಣ ಇದ್ದು ಮಳೆ ಬರುವ ನಿರೀಕ್ಷೆ ಇದೆ.

ಅತಿಯಾದ ಬಿಸಿಲಿನಿಂದ ಕೃಷಿಕರು ಕಂಗೆಟ್ಟಿದ್ದು, ಬೆಳೆ ಉಳಿಸಿಕೊಳ್ಳಲು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯ ಹನೂರು ತಾಲ್ಲೂಕಿನಲ್ಲೂ ಸಂಜೆ 10 ನಿಮಿಷಗಳ ಕಾಲ ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT