ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: 3 ವಾರದಿಂದ ಕಗ್ಗತ್ತಲಿನಲ್ಲಿ ಗ್ರಾಮ

ಗಾಳಿ–ಮಳೆಗೆ ಮುರಿದು ಬಿದ್ದ ವಿದ್ಯುತ್ ಕಂಬ
Last Updated 2 ಮೇ 2022, 19:09 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಳ್ಳಿ ಸಮೀಪದ ಹುಚ್ಚಪ್ಪನದೊಡ್ಡಿ ಗ್ರಾಮದಲ್ಲಿ ಮಳೆ–ಗಾಳಿಗೆ ವಿದ್ಯುತ್‌ ಕಂಬಗಳು ಬಿದ್ದಿದ್ದು, 18 ದಿನಗಳಿಂದಲೂ ವಿದ್ಯುತ್‌ ಸಂಪರ್ಕ ಇಲ್ಲದಿರುವುದರಿಂದ ರಾತ್ರಿ ಹೊತ್ತಿನಲ್ಲಿ ಗ್ರಾಮವು ಕಗ್ಗತ್ತಲಿನಲ್ಲೇ ಮುಳುಗಿದೆ.

ಕೆಲವು ದಿನದ ಹಿಂದೆ ಗ್ರಾಮದ ಸುತ್ತಮುತ್ತ ಬಿದ್ದ ಗಾಳಿ–ಮಳೆಗೆ ಚಿನ್ನಯ್ಯ ಜಮೀನಿನಲ್ಲಿ ನಾಲ್ಕೈದು ಕಂಬಗಳು ಮುರಿದು ಬಿದ್ದಿದ್ದರೆ, ಪುಟ್ಟರಾಜು ಎಂಬುವರ ಮನೆ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ.

ವಿದ್ಯುತ್ ಕಂಬ ಮುರಿದು ಬಿದ್ದು ಮೂರು ವಾರವಾದರೂ ದುರಸ್ತಿ ಮಾಡದಿದ್ದರಿಂದ ವಿದ್ಯುತ್ ಪೂರೈಕೆ ಇಲ್ಲದಾಗಿದೆ. ಗ್ರಾಮದ ಜನರು ಕತ್ತಲಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ. ‘ಈ ಬಗ್ಗೆ ಹನೂರು ಸೆಸ್ಕ್‌ನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ದುರಸ್ತಿಗೆ ಮುಂದಾಗಿಲ್ಲ’ ಎಂಬುದು ಗ್ರಾಮಸ್ಥರ ದೂರು.

‘ಜೆಇ, ಎಇಇ ಗಮನಕ್ಕೆ ತಂದಿದ್ದರೂ ಸ್ಪಂದನೆ ಶೂನ್ಯವಾಗಿದೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರು, ರೈತ ಸಂಘದ ಜೊತೆಗೂಡಿ ಹನೂರಿನ ಸೆಸ್ಕ್‌ ಕಚೇರಿ ಮುಂದೆ ಪ್ರತಿಭಟಿಸಬೇಕಾಗುತ್ತದೆ’ ಎಂದು ಗ್ರಾ. ಪಂ. ಉಪಾಧ್ಯಕ್ಷ ರಾಮಲಿಂಗಂ ಎಚ್ಚರಿಸಿದರು.

‘ಗ್ರಾಮದ ಜಮೀನಿನಲ್ಲಿ ಕಂಬಗಳು ಬಾಗಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಹನೂರು ಎಇಇಗೆ ಸೂಚನೆ ನೀಡಲಾಗಿದೆ. ನಿರಂತರ ರಜೆಯಿದ್ದರಿಂದ ದುರಸ್ತಿ ಆಗಿರಲಿಲ್ಲ. ಮಂಗಳವಾರದಿಂದ ಬೇರೆ ಕಂಬಗಳನ್ನು ಅಳವಡಿಸಲಾಗುವುದು’ ಎಂದು ಕೊಳ್ಳೇಗಾಲ ಇಇ ಪ್ರೀತಮ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT