ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನವ ಹಕ್ಕು ಉಲ್ಲಂಘನೆ: ದೇಶದ ಅಭಿವೃದ್ಧಿಗೆ ಧಕ್ಕೆ: ಶ್ರೀಧರ ಎಂ.

Published : 20 ಡಿಸೆಂಬರ್ 2023, 15:55 IST
Last Updated : 20 ಡಿಸೆಂಬರ್ 2023, 15:55 IST
ಫಾಲೋ ಮಾಡಿ
Comments

ಚಾಮರಾಜನಗರ: ಸಮಾಜದಲ್ಲಿ ಜನಸಾಮಾನ್ಯರು ಸುಗಮ ಜೀವನ ನಡೆಸಲು ಮಾನವ ಹಕ್ಕುಗಳು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ತಿಳಿಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಒಡಿಪಿ ಸಂಸ್ಥೆ ಸಹಯೋಗದಲ್ಲಿ ನಡೆದ ಸಂವಿಧಾನ ಮತ್ತು ಮಾನವ ಹಕ್ಕುಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಾನವ ಹಕ್ಕುಗಳ ಉಲ್ಲಂಘನೆ ದೇಶದ ಅಭಿವೃದ್ದಿ ಮೇಲೆ ದುಷ್ಪರಿಣಾಮ ಬೀರುತ್ತದೆ. ನಮ್ಮ ದೇಶದ ಸಂವಿಧಾನ ಅತ್ಯುನ್ನತ ಗ್ರಂಥವಾಗಿದ್ದು ಸಂವಿಧಾನವು ಮಾನವ ಘನತೆ, ಸ್ವಾತಂತ್ರ್ಯ, ಭಾತೃತ್ವ, ಗೌರವದಿಂದ ಸಮಾಜದಲ್ಲಿ ಬದುಕಬೇಕು’ ಎಂದು ತಿಳಿಸುತ್ತದೆ.

‘ಸಂವಿಧಾನದ ಅಡಿಯಲ್ಲಿ ಕಾನೂನುಗಳು ರಚನೆಯಾಗಿದ್ದು, ಸಂವಿಧಾನ ನಮಗೆ ಅನೇಕ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದರು.

‘ಪ್ರಸ್ತುತ ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ವ್ಯಕ್ತಿಯ ಘನತೆಗೆ ಕುಂದು ತರುವ ಘಟನೆಗಳು ನಡೆಯುತ್ತಿದ್ದು, ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯಗಳೂ ನಡೆಯುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಬಾಹಿರವಾದ ಸಾಮಾಜಿಕ ಪಿಡುಗುಗಳು ಇನ್ನೂ ಆಚರಣೆಯಲ್ಲಿವೆ. ಅನ್ಯಾಯದ ವಿರುದ್ದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಬಾಲ್ಯವಿವಾಹ ತಡೆಗಟ್ಟಬೇಕು, ಲೈಂಗಿಕ ದೌರ್ಜನ್ಯ ಕಾಯ್ದೆ ಬಗ್ಗೆ ಎಲ್ಲರೂ ಮಾಹಿತಿ ಹೊಂದಬೇಕು’ ಎಂದು ಸಲಹೆ ನೀಡಿದರು. 

ಬಾಲ ನ್ಯಾಯಮಂಡಳಿ ಸದಸ್ಯ ಸುರೇಶ್, ಕಾಗಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ, ಶ್ರೀದೇವಿ ಮಾತನಾಡಿದರು.  

ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧಿಕಾರಿ ಸೋಮಶೇಖರ್, ಆಯೋಜನೆ ಕ್ಷೇತ್ರ ಸಂಯೋಜಕಿ ಲತಾ, ವಲಯ ಸಂಯೋಜಕ ಸಿದ್ದರಾಜು, ಕಾರ್ಯಕರ್ತರಾದ ರೇಖಾಮಣಿ, ಸರೋಜ, ಮರಿಜೋಸೆಫ್, ರವಿಕುಮಾರ್ ಮಹಿಳೋದಯ ಒಕ್ಕೂಟದ ಸದಸ್ಯರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT