ಕೊಳ್ಳೇಗಾಲ: ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ದೇಶ ಭಾರತ. ನಾವು ನಮ್ಮ ತಾಯಿಯನ್ನು ಹೇಗೆ ಪ್ರೀತಿಸುತ್ತೇವೋ ಹಾಗೇ ದೇಶವನ್ನು ಸಹ ಪ್ರೀತಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ವಿಶ್ರಾಂತ ಹೆಚ್ಚುವರಿ ನಿರ್ದೇಶಕ ಕೆ.ಎಸ್.ಮೃತೃಂಜಯಪ್ಪ ಹೇಳಿದರು.

ನಗರದ ಗುರುಭವನದಲ್ಲಿ ಭಾನುವಾರ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿ ವಿಚಾರ ಸಂಕಿರಣ ಕಾರ್ಯಕ್ರಮ ಹಾಗೂ ಕಾಯಕಯೋಗಿ ಶ್ರೀ ಮಹರ್ಷಿ ವಾಲ್ಮೀಕಿ ಸೇವರಾತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಈ ದೇಶದ ಮಣ್ಣಿನಲ್ಲಿ ಅನೇಕ ಧರ್ಮಗಳು ಹುಟ್ಟಿವೆ. ಭಾರತ ದೇಶ ಒಂದು ಧರ್ಮಕ್ಕೆ ಸೀಮಿತವಲ್ಲ ಎಲ್ಲಾ ಧರ್ಮಕ್ಕೂ ಸೇರಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೂ 4635 ಜಾತಿಗಳು ಈ ದೇಶದಲ್ಲಿ ಇದ್ದು 3 ಸಾವಿರಕ್ಕೂ ಹೆಚ್ಚು ಭಾಷೆಗಳು ಇವೆ. ಹಾಗಾಗಿ ಬಹು ಧರ್ಮ, ಬಹುಭಾಷೆ ಇರುವ ಏಕೈಕ ದೇಶ ಎಂದರೆ ಅದು ನಮ್ಮ ಭಾರತ. ಇಲ್ಲಿ ಹುಟ್ಟಿದ ಪ್ರತಿಯೊಬ್ಬರು ಧನ್ಯರು ಎಂದರು.

‘ಪ್ರತಿಯೊಬ್ಬ ನಾಗರಿಕರು ಸಂವಿಧಾನಕ್ಕೆ ಬದ್ಧರಾಗಬೇಕು. ಸಂವಿಧಾನ ನಮ್ಮ ದೇಶದ ಹಕ್ಕು ಹಾಗೂ ಆಸ್ತಿ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಹಲವಾರು ವರ್ಷಗಳಿಂದಲೂ ಅನೇಕರು ಸಂವಿಧಾನಕ್ಕೆ ಧಕ್ಕೆ ಇದೆ ಎಂದು ಹೇಳುತ್ತಾರೆ, ಇದು ಎಷ್ಟರಮಟ್ಟಿಗೆ ಸರಿ? ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನವನ್ನು ಪ್ರತಿಯೊಬ್ಬರಿಗೂ ತಿಳಿಸುವಂತಹ ಕೆಲಸವನ್ನು ನಿರಂತರವಾಗಿ ಮಾಡಬೇಕು. ಆಗ ಮಾತ್ರ ನಮ್ಮ ಸಂವಿಧಾನ ಶ್ರೇಷ್ಠವಾಗಿ ಉಳಿಯುತ್ತದೆ. ಯಾರು ಸಹ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದಿಂದ ಅನೇಕ ಸಂಪತ್ತುಗಳನ್ನು ಗಳಿಸಬಹುದು. ಪ್ರತಿಯೊಬ್ಬರೂ ಶಿಕ್ಷಣದತ್ತ ಮುಖ ಮಾಡಬೇಕು. ದುಶ್ಚಟಗಳಿಂದ ದೂರ ಇದ್ದು ಶಿಕ್ಷಣದ ಬಗ್ಗೆ ಆಸಕ್ತಿ ತೋರಬೇಕು ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ರಾಜಕುಮಾರ್, ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯಲ್ಲಿರುವ ಸವಲತ್ತುಗಳ ಬಗ್ಗೆ ಮಾತನಾಡಿದರು.

ಬಳಿಕ ವೈದ್ಯಕೀಯ ಶಿಕ್ಷಣ ಪ್ರವೇಶ ಪಡೆದಿರುವ ಸಮುದಾಯದ 7 ವಿದ್ಯಾರ್ಥಿಗಳಿಗೆ ಹಾಗೂ 30 ನಿವೃತ್ತರು ಹಾಗೂ ಹಾಲಿ ನೌಕರರಿಗೆ ಮಹರ್ಷಿ ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು.

ಚಾಮರಾಜನಗರ, ಮೈಸೂರು ನಾಯಕ ಸಂಘದ ಅಧ್ಯಕ್ಷ ರಾಮಚಂದ್ರ, ವಾಣಿಜ್ಯ ತೆರಿಗೆ ಇಲಾಖೆ ಉಪಾಯುಕ್ತ ಎಚ್.ಎಸ್.ಮಂಜುನಾಥ್, ಹರದನಹಳ್ಳಿ ಪ್ರೊ. ನಂಜುಂಡಸ್ವಾಮಿ, ನಾಯಕ ಸಮುದಾಯ ಕಸಬಾ ಯಜಮಾನ ಚಿಕ್ಕಮಾದು, ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷ ಜಗದೀಶ್ ನಾಯಕ, ಕಾರ್ಯಕಾರಿ ಸಮಿತಿ ಸದಸ್ಯರು ಶಾಂತರಾಜು, ಗೋವಿಂದರಾಜು, ಶ್ರೀಧರ್ ನಾಯಕ, ಸಿದ್ದಪ್ಪಾಜಿ, ಪಿಳಪ್ಪ, ರಂಗನಾಥ್, ರಘು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.