ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮ ವ್ಯಾಪ್ತಿಯ ಗವಿರಾಯಸ್ವಾಮಿ ಬೆಟ್ಟದ ಕೆಳಭಾಗದ ರಸ್ತೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

‘ಸೋಮವಾರ ಸಂಜೆ ಗವಿರಾಯನ ಬೆಟ್ಟಕ್ಕೆ ತೆರಳಿ ಬರುತ್ತಿದ್ದ ಸಮಯದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಕಾರನ್ನು ಕಂಡು ಚಿರತೆ ಕಾಡಿಗೆ ಓಡಿತು’ ಎಂದು ಸತ್ತೇಗಾಲ ಗ್ರಾಮದ ಕೋಟೆಬೀದಿಯ ವೆಂಕಟಾಚಲ ತಿಳಿಸಿದರು.

ಮಾರ್ಚ್ 3ರಂದು ಗವಿರಾಯಸ್ವಾಮಿ ಬೆಟ್ಟದಲ್ಲಿ ಬ್ರಹ್ಮರಥೋತ್ಸವ ಜರುಗಲಿದ್ದು ಚಿರತೆ ಬೆಟ್ಟದ ಮೇಲೆ ಕಾಣಿಸಿಕೊಂಡಿರುವುದರಿಂದ ಬೆಟ್ಟಕ್ಕೆ ಹೋಗಲು ಭಕ್ತರು ಹಿಂಜರಿಯುತ್ತಿದ್ದು, ಅರಣ್ಯಾಧಿಕಾರಿಗಳು ಚಿರತೆ ಹಿಡಿಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಗವಿರಾಯಸ್ವಾಮಿ ಬೆಟ್ಟದ ಸುತ್ತ ಚಿರತೆ ಕಂಡುಬಂದಿದೆ. ಈಗಾಗಲೇ ನಮ್ಮ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿ ಇದ್ದಾರೆ. ಮಂಗಳವಾರ ನಡೆಯುವ ರಥೋತ್ಸವದ ಸಮಯದಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಂಡಿದ್ದೇವೆ. ಯಾರೂ ಭಯಪಡುವ ಅಗತ್ಯವಿಲ್ಲ’ ಎಂದು ಆರ್ಎಫ್ಒ ರವಿಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.