ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಗುಂಡ್ಲುಪೇಟೆ: ಕೆಲವೆಡೆ ತಾಂತ್ರಿಕ ದೋಷ

Published 27 ಏಪ್ರಿಲ್ 2024, 5:57 IST
Last Updated 27 ಏಪ್ರಿಲ್ 2024, 5:57 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಲೋಕಸಭಾ ಚುನಾವಣೆಯ ಅಂಗವಾಗಿ ತಾಲ್ಲೂಕಿನಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಬಿಸಿಲಿನ ನಡುವೆಯೂ ಜನರು ಮತಗಟ್ಟೆಗೆ ಆಗಮಿಸಿ ಸರದಿಯಲ್ಲಿ ನಿಂತು ಮತದಾನ ಮಾಡಿದರು.

ತಾಲ್ಲೂಕಿನ ತೆರಕಣಾಂಬಿಹುಂಡಿ ಮತಗಟ್ಟೆ ಸಂಖ್ಯೆ-107, ಮಲ್ಲಮ್ಮನಹುಂಡಿ ಮತಗಟ್ಟೆ ಸಂಖ್ಯೆ-99, ಮಂಗಲ ಮತಗಟ್ಟೆ ಸಂಖ್ಯೆ-141, ಏಲಚೆಟ್ಟಿ ಮತಗಟ್ಟೆ ಸಂಖ್ಯೆ-64, ಕಳ್ಳಿಪುರ ಮತಗಟ್ಟೆ ಸಂಖ್ಯೆ-171, ಹೊಂಗಹಳ್ಳಿ ಮತಗಟ್ಟೆ ಸಂಖ್ಯೆ-182 ರಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆ ಕೆಲ ಕಾಲ ಮತದಾನ ಸ್ಥಗಿತಗೊಳಿಸಿ, ನಂತರ ವಿವಿ ಪ್ಯಾಟ್ ಬದಲಾವಣೆ ಮಾಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಅವರು ತನ್ನ ಕುಟುಂಬದವರೊಡನೆ ಬಂದು ಸ್ವಗ್ರಾಮ ಹಾಲಹಳ್ಳಿಯಲ್ಲಿ ಮತದಾನ ಮಾಡಿದರು. ಮಾಜಿ ಸಚಿವೆ ಗೀತಾ ಮಹದೇವ ಪ್ರಸಾದ್, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್ ಜೊತೆಯಾದರು.

ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ ಕುಮಾರ್ ಚೌಡಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ತೆರಳಿ ಮತ ಚಲಾಯಿಸಿದರು.

ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಹಾಗೂ ಕುಟುಂಬಸ್ಥರು ಮತ ಚಲಾಯಿಸಿದರು
ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಹಾಗೂ ಕುಟುಂಬಸ್ಥರು ಮತ ಚಲಾಯಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT