ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಅವಿವಾಹಿತೆ ಗರ್ಭಿಣಿ- ವಿವಾಹಿತನ ಬಂಧನ

Published 19 ಡಿಸೆಂಬರ್ 2023, 16:07 IST
Last Updated 19 ಡಿಸೆಂಬರ್ 2023, 16:07 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಅವಿವಾಹಿತೆಯೊಬ್ಬರು ಗರ್ಭಿಣಿಯಾಗಿರುವ ಸಂಬಂಧ ಕೊಳ್ಳೇಗಾಲದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಅತ್ಯಾಚಾರ ಪ್ರಕರಣ ದಾಖಲಾಗಿದೆ.  

‘ಸೋಮಶೇಖರ್‌ ಎಂಬುವವರು ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ ಆಗಾಗ ದೈಹಿಕ ಸಂಬಂಧ ಬೆಳೆಸಿದ್ದರಿಂದ ನಾನು ಗರ್ಭಿಣಿಯಾಗಿದ್ದೇನೆ’ ಎಂದು ತಾಲ್ಲೂಕಿನ ಗ್ರಾಮವೊಂದರ 45 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. 

ಸೋಮಶೇಖರ್‌ ಅವರಿಗೆ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. 

‘ನನ್ನನ್ನು ಮದುವೆಯಾಗುವಂತೆ ಸೋಮಶೇಖರ್ ಅವರನ್ನು ಹಲವಾರು ಬಾರಿ ಕೇಳಿಕೊಂಡರೂ ಅವರು ನಿರಾಕರಿಸಿದ್ದಾರೆ. ಗ್ರಾಮದ ಯಜಮಾನರಿಗೂ ಈ ವಿಚಾರ ತಿಳಿಸಿದ್ದು, ಸೊಮಶೇಖರ್ ಪಂಚಾಯಿತಿಗೆ ಬಾರದೆ ಏನು ಬೇಕಾದರೂ ಮಾಡಿಕೊಳ್ಳಿ ಎಂದು ನಿರ್ಲಕ್ಷಿಸಿದ್ದಾರೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ಸೋಮಶೇಖರ್‌ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT