ಕೊಳ್ಳೇಗಾಲ: ತಮ್ಮನ ಕಣ್ಣೆದುರೇ ಅಣ್ಣ ಕಾವೇರಿ ನದಿಗೆ ಹಾರಿರುವ ಘಟನೆ ತಾಲ್ಲೂಕಿನತಾಲ್ಲೂಕಿನ ದಾಸನಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಕುರುಬಾರ ಹುಂಡಿ ಗ್ರಾಮದ ಬಸವರಾಜ ಆರಾಧ್ಯ (31) ನದಿಗೆ ಹಾರಿದವರು. ದಾಸನಪುರ ಗ್ರಾಮದಲ್ಲಿರುವ ಸೇತುವೆಯಿಂದ ಏಕಾಏಕಿ ನದಿಗೆ ಹಾರಿದ್ದಾರೆ. ಆತ್ಮಹತ್ಯೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ನುರಿತ ಈಜುಗಾರರು ಮೂರು ಗಂಟೆಗೂ ಹೆಚ್ಚು ಕಾಲ ನದಿಯಲ್ಲಿ ಹುಡುಕಾಟ ನಡೆಸಿದ್ದು, ಬಸವರಾಜ ಅವರು ಪತ್ತೆಯಾಗಿಲ್ಲ.

ಬಸವರಾಜ ಅವರು ಎರಡು ಮೂರು ಬಾರಿ ಬೈಕ್ನಲ್ಲಿ ಅಪಘಾತವಾಗಿತ್ತು. ಆ ಕಾರಣ ವೈದ್ಯರ ಸಲಹೆಯಂತೆ ಪಿಸಿಯೋಥೆರಪಿ ಮಾಡಿಸಿಕೊಳ್ಳಲು ಕೊಳ್ಳೇಗಾಲಕ್ಕೆ ತಮ್ಮ ವಿವೇಕ್ ಆರಾಧ್ಯರ ಜೊತೆ ನಿತ್ಯವೂ ಬರುತ್ತಿದ್ದರು. ಶನಿವಾರ ದಾಸನಪುರ ಗ್ರಾಮದ ಸೇತುವೆ ಮೇಲೆ ಬೈಕ್ನಲ್ಲಿ ಬರುತ್ತಿದ್ದ ವೇಳೆ, ಬಸವರಾಜ ಅವರು ‘ವಾಂತಿ ಬರುತ್ತಿದೆ. ಬೈಕ್ ನಿಲ್ಲಿಸು’ ಎಂದು ತಮ್ಮನಿಗೆ ಹೇಳಿದ್ದಾರೆ. ಆಗ ಇದ್ದಕ್ಕಿದಂತೆ ಬಸವರಾಜ ಆರಾಧ್ಯ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಠಾಣೆಗೆ ವಿವೇಕ್ ಆರಾಧ್ಯ ಅವರು ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.