ಚಾಮರಾಜನಗರ: ಮಾರುಕಟ್ಟೆಗೆ ಅವರೆ ಹಾಗೂ ತೊಗರಿ ಕಾಳುಗಳು ಲಗ್ಗೆ ಇಟ್ಟಿದ್ದು, ಮಾರುಕಟ್ಟೆ, ರಸ್ತೆ ಬದಿಗಳಲ್ಲಿ ಇವುಗಳ ವ್ಯಾಪಾರ ಜೋರಾಗಿದೆ.

ಶತಕದ ಗಡಿ ದಾಟಿದ್ದ ಕೆ.ಜಿ ಈರುಳ್ಳಿ ಬೆಲೆ ಈ ವಾರ ₹ 10 ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಬೆಲೆ ₹ 60ರಿಂದ₹ 100 ಇದೆ.ಸಣ್ಣ ಗಾತ್ರದ ಈರುಳ್ಳಿ ಬೆಲೆ ₹ 60ರಿಂದ ₹ 80 ಇದ್ದರೆ, ದಪ್ಪ ಈರುಳ್ಳಿ ₹ 0ರಿಂದ ₹ 100ಕ್ಕೆ ಮಾರಾಟವಾಗುತ್ತಿದೆ.

ಹಾಪ್ಕಾಮ್ಸ್ನಲ್ಲಿ ತೊಗರಿ ಕೆ.ಜಿ.ಗೆ ₹30ರಿಂದ ₹40 ಹಾಗೂ ಅವರೆ ₹50ರಿಂದ ₹60 ಧಾರಣೆ ಇದೆ. ಹೊರಗಡೆಯೂ ಇದೇ ಬೆಲೆಗೆ ಮಾರಾಟವಾಗುತ್ತಿದೆ.

ನಗರದ ಎಲ್ಲ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಈಗ ತೊಗರಿಗೆ ಬೇಡಿಕೆ ಇದ್ದು, ಹೆಚ್ಚು ಮಾರಾಟವಾಗುತ್ತಿದೆ. ಅವರೆ ಕಾಳುಹಾಪ್ಕಾಮ್ಸ್ನಲ್ಲಿ ವಿರಳ. ಆದರೆ, ತಳ್ಳುಗಾಡಿಗಳಲ್ಲಿ ಈ ಎರಡೂ ಕಾಳುಗಳ ಮಾರಾಟ ಭರ್ಜರಿಯಾಗಿದೆ.

‘ಎರಡು ದಿನಗಳಿಂದತೊಗರಿ ಮಾರಾಟ ಮಾಡಲಾಗುತ್ತಿದೆ. ರೈತರು ನೇರವಾಗಿ ಎಪಿಎಂಸಿಗೆ ತರುತ್ತಾರೆ. ನಾವು ಮಾರುಕಟ್ಟೆಯಿಂದಲೇ ಖರೀದಿ ಮಾಡುತ್ತೇವೆ. ಎಪಿಎಂಸಿಯಲ್ಲಿ ಕೆ.ಜಿ ತೊಗರಿಗೆ ₹ 40ರಿಂದ₹ 45 ಬೆಲೆ ಇದೆ. ಈಗಷ್ಟೇ ಈ ಕಾಳುಗಳಿಗೆ ಬೇಡಿಕೆ ಶುರುವಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ಹೇಳಿದರು.

ತರಕಾರಿ ಬೆಲೆ ಹೆಚ್ಚಳ: ಕೆಲವು ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ವಿವಾಹ ಮಹೋತ್ಸವ, ಹಬ್ಬಗಳಂತಹ ಕಾರ್ಯಕ್ರಮಗಳು ಜರುಗುವುದರಿಂದ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದೆ. ಕ್ಯಾರೆಟ್, ಬೀನ್ಸ್ ₹ 5, ಮರಗೆಣಸು, ಹಸಿಮೆಣಸಿನಕಾಯಿ ₹ 10, ಶುಂಠಿ₹ 30 ಈ ವಾರ ಹೆಚ್ಚಳವಾಗಿದೆ.ಟೊಮೆಟೊ, ಬದನೆಕಾಯಿ ₹ 5 ಇಳಿಕೆಯಾಗಿದೆ. ಉಳಿದ ತರಕಾರಿಗಳಿಗೆ ಕಳೆದ ವಾರದ ದರವೇ ಇದೆ.

ಹಣ್ಣುಗಳು: ಈ ವಾರ ಕಿತ್ತಳೆ ₹10 ಕಡಿಮೆಯಾಗಿದೆ. ಸಪೋಟ₹20 ಹೆಚ್ಚಳವಾಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.

ಹೂವಿನ ಬೆಲೆ ಇಳಿಕೆ: ಕಳೆದ ವಾರ ಜಿಲ್ಲೆಯಾದ್ಯಂತ ಕಾರ್ತೀಕ ಸೋಮವಾರದ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು. ಆದರೆ, ಈ ವಾರ ಎಲ್ಲ ಹೂವುಗಳ ಬೆಲೆ ಇಳಿಕೆಯಾಗಿದೆ.

ಮೊಟ್ಟೆ ಬೆಲೆ ಹೆಚ್ಚಳ: ಪ್ರತಿ ಮೂರು ದಿನಗಳಿಗೊಮ್ಮೆ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುವ ಮೊಟ್ಟೆ ಈ ವಾರ₹ 22 ಹೆಚ್ಚಳವಾಗಿದೆ. ಕಳೆದ ವಾರ₹ 445 ಇದ್ದಬೆಲೆ ಸೋಮವಾರ ₹ 467 ಆಗಿದೆ. ಮಾಂಸ ಮಾರುಕಟ್ಟೆಯಲ್ಲಿನ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.