ಚಾಮರಾಜನಗರ: ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ. ಟೊಮೆಟೋ, ಬೀಟ್ರೂಟ್, ಕ್ಯಾಪ್ಸಿಕಂ ದರ ಏರುಗತಿಯಲ್ಲಿ ಸಾಗಿದ್ದು ಗ್ರಾಹಕರಿಗೆ ಹೊರೆಯಾಗಿದೆ.

ಕಳೆದವಾರ ಕೆ.ಜಿಗೆ 20ಕ್ಕೆ ಮಾರಾಟವಾಗಿದ್ದ ಟೊಮೆಟೊ ಪ್ರಸ್ತುತ ₹ 30 ರಿಂದ ₹ 40ರವರೆಗೂ ದರ ಹೆಚ್ಚಿಸಿಕೊಂಡಿದೆ. ಮಳೆ ಹೆಚ್ಚಾಗಿ ಟೊಮೆಟೊ ಬೆಳೆ ಕೊಳೆತುಹೋದರೆ ದರ ಹೆಚ್ಚಾಗಲಿದೆ, ಇಲ್ಲವಾದರೆ ಸ್ಥಿರವಾಗಿರಲಿದೆ. ಸದ್ಯ ಮಾರುಕಟ್ಟೆಯ ಬೇಡಿಕೆಯಷ್ಟು ಪೂರೈಕೆಯಾಗುತ್ತಿದ್ದು ಏರುಪೇರಾದರೆ ದರವೂ ಹೆಚ್ಚು ಕಡಿಮೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬೀಟ್ರೂಟ್ ದರ ಹೆಚ್ಚಳ: 15 ದಿನಗಳ ಹಿಂದೆ ಕೆ.ಜಿ ಬೀಟ್ರೂಟ್ ₹ 15 ರಿಂದ ₹ 20ಕ್ಕೆ ಮಾರಾಟವಾಗಿತ್ತು. ಸದ್ಯ ಕೆ.ಜಿಗೆ ₹ 50 ದಾಟಿದ್ದು, ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಬೀಟ್ರೂಟ್ ಎರಡೂವರೆ ತಿಂಗಳಿನಿಂದ ಮೂರು ತಿಂಗಳ ಅವಧಿಯ ಬೆಳೆಯಾಗಿದ್ದು ಕಳೆದ ಹಂಗಾಮಿನಲ್ಲಿ ತೀವ್ರ ದರ ಕುಸಿತದ ಪರಿಣಾಮ ಬೀಟ್ರೂಟ್ ಬೆಳೆಯಲು ಬೆಳೆಗಾರರು ಹೆಚ್ಚು ಆಸಕ್ತಿ ತೋರಿರಲಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ದರ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್.

ಶತಕ ಬಾರಿಸಿದ ಕ್ಯಾಪ್ಸಿಕಂ: ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿ ತಯಾರಾಗುವ ಖಾದ್ಯಗಳಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ) ದರ ಗಗನಕ್ಕೇರಿದ್ದು ಶತಕ ದಾಟಿದೆ. ವಾರದ ಹಿಂದೆ ಕೆ.ಜಿಗೆ 70 ರಿಂದ 80 ಇದ್ದ ದರ ಪ್ರಸ್ತುತ 100ರಿಂದ120ಕ್ಕೆ ಏರಿಕೆಯಾಗಿದೆ. ಬೆಳೆನಾಶ, ರೋಗಬಾಧೆ, ಪೂರೈಕೆ ಕೊರತೆಯಿಂದ ಕ್ಯಾಪ್ಸಿಕಂಗೆ ಬೇಡಿಕೆ ಸೃಷ್ಟಿಯಾಗಿದ್ದು ದರವೂ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿ ಮಹದೇವ್.

ಸೇಬು ದುಬಾರಿ: ಸೀಸನ್ ಅವಧಿಯಲ್ಲಿ ಕೆ.ಜಿಗೆ 100 ರಿಂದ 150ಕ್ಕೆ ಸಿಗುತ್ತಿದ್ದ ಸೇಬಿನ ದರ ದುಪ್ಪಟ್ಟಾಗಿದ್ದು ತಳಿ, ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ ಕೆ.ಜಿಗೆ ಕನಿಷ್ಠ 250 ರಿಂದ ಗರಿಷ್ಠ 280ರವರೆಗೂ ಮಾರಾಟವಾಗುತ್ತಿದೆ. ಪಪ್ಪಾಯ ಕೆ.ಜಿಗೆ 20 ರಿಂದ 30, ಏಲಕ್ಕಿ ಬಾಳೆ 60 ರಿಂದ 80, ಸಪೋಟ 80, ದಾಳಿಂಬೆ 200 ರಿಂದ 250 ಇದೆ.

ಹೂವಿನ ದರ ಇಳಿಕೆ: ಆಷಾಢ ಸಮೀಪಿಸುತ್ತಿರುವುದು ಹಾಗೂ ಮದುವೆ, ಗೃಹಪ್ರವೇಶ ಸೇರಿದಂತೆ ಶುಭ ಕಾರ್ಯಗಳು ಕಡಿಮೆಯಾಗುತ್ತಿರುವುದರಿಂದ ಹೂವಿನ ದರ ಕುಸಿದಿದೆ. ಸೇವಂತಿಗೆ ಕೆ.ಜಿಗೆ ₹ 120ರಿಂದ ₹160, ಗುಲಾಬಿ ₹100–₹120, ಮಲ್ಲಿಗೆ ₹320–₹400, ಸಣ್ಣ ಮಲ್ಲಿಗೆ ₹160–₹200, ಸುಗಂಧರಾಜ ₹20–₹30, ಕನಕಾಂಬರ ₹500–₹600, ಚೆಂಡು ಹೂ ₹20–₹30 ದರ ಇದೆ ಎನ್ನುತ್ತಾರೆ ಚೆನ್ನಾಪುರದ ಮೋಳೆ ರಸ್ತೆಯ ಹೂವಿನ ವ್ಯಾಪಾರಿ ರವಿ.

ಮಾವಿನ ದರ ಕುಸಿತ

ಹಣ್ಣುಗಳ ರಾಜ ಮಾವಿನ ದರ ಕುಸಿತವಾಗಿದೆ. ಬಾದಾಮಿ ನೀಲಂ ರಸಪೂರಿ ಬಾಗನ್ಪಲ್ಲಿ ತಳಿಯ ಮಾವು ಕೆ.ಜಿಗೆ 50 ರಿಂದ 60ಕ್ಕೆ ಸಿಗುತ್ತಿದೆ. ತೋತಾಪುರಿ ದರ ಕೆ.ಜಿಗೆ 40ಕ್ಕೆ ಇಳಿಕೆಯಾಗಿದೆ. ಆರಂಭದಲ್ಲಿ ಶತಕದ ಗಡಿ ದಾಟಿದ್ದ ಮಾವಿನ ದರ ನಂತರ ಭಾರಿ ಕುಸಿತ ಕಂಡಿದೆ. ಐದಾರು ಕೆ.ಜಿ ಖರೀದಿ ಮಾಡಿದರೆ ಮಾರುಕಟ್ಟೆ ದರಕ್ಕಿಂತಲೂ ಅಗ್ಗದಲ್ಲಿ ಸಿಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.