ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ವಜನಿಕ ಮಸೀದಿ ದರ್ಶನ ಸೆ.16ರಂದು : ಅಬ್ದುಸ್ಸಲಾಮ್

ಮಸೀದಿ, ಮದರಸಾಗಳ ಬಗ್ಗೆ ತಪ್ಪು ಕಲ್ಪನೆ ನಿವಾರಣೆಗೆ ಕಾರ್ಯಕ್ರಮ
Published : 12 ಸೆಪ್ಟೆಂಬರ್ 2024, 14:00 IST
Last Updated : 12 ಸೆಪ್ಟೆಂಬರ್ 2024, 14:00 IST
ಫಾಲೋ ಮಾಡಿ
Comments

ಚಾಮರಾಜನಗರ: ನಗರದ ಮದೀನಾ ಮಸ್ಜಿದ್ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಸಹಯೋಗದಲ್ಲಿ ಸೀರತ್ ಪ್ರಯುಕ್ತ ಸೆ.16 ರಂದು ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ಮೈಸೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಮ್ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 16ರಂದು ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆಯವರೆಗೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆಯಲ್ಲಿರುವ ಮದೀನಾ ಮಸೀದಿಯಲ್ಲಿ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಹರವೆ ಮಠದ ಸರ್ಪಭೂಷಣ ಸ್ವಾಮೀಜಿ, ಇಸ್ಲಾಮಿಕ್ ಕೋರ್ಟ್‌ನ ಖಾಝಿ ಮೌಲಾನಾ ಮುಫ್ರಿ ಜಾಫ‌ರ್ ಹುಸೇನ್‌ ಖಾಸ್ಮಿ, ಸಂತಪಾಲ ಚರ್ಚ್‌ನ ಫಾದ‌ರ್ ಅಂಥೋನಪ್ಪ ಉಪಸ್ಥಿತರಿರಲಿದ್ದಾರೆ.

ಸಂಸದ ಸುನೀಲ್‌ಬೋಸ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್‌ಪಿ ಬಿ.ಟಿ.ಕವಿತಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮಕ್ಕು ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಮಸೀದಿಗೆ ಭೇಟಿ ನೀಡಿ ವೀಕ್ಷಿಸಬಹುದು. ಸಮಾಜದಲ್ಲಿ ಮುಸ್ಲಿಂ ಧರ್ಮ, ಮಸೀದಿ, ಮದರಸಾಗಳ ಬಗ್ಗೆ ಇರುವ ತಪ್ಪು ಭಾವನೆಗಳನ್ನು ದೂರ ಮಾಡಲು ಕಾರ್ಯಕ್ರಮ ಆಯೋಜಿಸಲಾಗಿದೆ. ಮಸೀದಿ ಸಂದರ್ಶನದ ಜೊತೆಗೆ ನಮಾಜ್ ಕೂಡ ವೀಕ್ಷಣೆ ಮಾಡಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮದೀನ ಮಸೀದಿ ಅಧ್ಯಕ್ಷ ನಯೀಮ್ ಉಲ್ ಹಕ್, ಕಾರ್ಯದರ್ಶಿ ವಸೀಂ ಪಾಷ, ಧರ್ಮಗುರು ಮೌಲಾನಾ ಹಫಿಝ್ ಸೈಯದ್ ಮೊಕ್ತಾರ್ ಅಹಮದ್, ಜಮಾಅತೆ ಇಸ್ಲಾಮೀ ಹಿಂದ್ ಸಂಚಾಲಕ ಝನುಲ್ ಆಬಿದೀನ್, ಇರ್ಷಾದ್ ಪಾಷ, ನಯಾಜ್ ಪಾಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT