ಶನಿವಾರ, ಜನವರಿ 28, 2023
18 °C

ನನ್ನ ಕೆಲಸದ ಸಾಮರ್ಥ್ಯ ನೋಡಿ ಅಮಿತ್ ಶಾ ನಮ್ಮ ಮನೆಗೆ ಬಂದಿದ್ದರು: ವಿ ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: 'ಕೆಲಸಗಾರನ ಸಾಮರ್ಥ್ಯ ಗುರುತಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನ್ನ ಮನೆಗೆ ಭೇಟಿ ಕೊಟ್ಟಿದ್ದಾರೆ. ಇದು ಸೌಹಾರ್ದಯುತ ಭೇಟಿಯಷ್ಟೇ. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಅನನುಕೂಲವೂ ಆಗುವುದಿಲ್ಲ' ಎಂದು ವಸತಿ, ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಶನಿವಾರ ಹೇಳಿದರು.

ಅಮಿತ್ ಶಾ ಇತ್ತೀಚೆಗೆ ತಮ್ಮ ಮನೆಗೆ ಭೇಟಿ ನೀಡಿದ ಬಗ್ಗೆ ತಾಲ್ಲೂಕಿನ ಕಾಗಲವಾಡಿಮೋಳೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, 'ಪಕ್ಷದ ಸಿದ್ಧಾಂತದ ಅಡಿ‌ ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡುತ್ತಿದ್ದೆ. ಅದು ಹೊರ ಜಗತ್ತಿಗೆ ಗೊತ್ತಾಯಿತು. ಕೇಂದ್ರದ ಗೃಹ ಸಚಿವರೊಬ್ಬರು ರಾಜ್ಯದ ಮುಖಂಡನ ಮನೆಗೆ ಮಾಹಿತಿಯಿಲ್ಲದೇ ಬರುತ್ತಾರೆಯೇ? 2023 ಕ್ಕೂ ಡಬಲ್ ಎಂಜಿನ್ ಸರ್ಕಾರ ಬರಬೇಕು ಎನ್ನುವುದು ಅವರ ಉದ್ದೇಶ' ಎಂದರು.

'ಯಾವ್ಯಾವ ಸಮಯಕ್ಕೆ ಏನು ಆಗಬೇಕು ಅದೆಲ್ಲಾ ಆಗುತ್ತದೆ. ಅಮಿತ್ ಶಾ ಇಷ್ಟೊಂದು ಹೃದಯ ಸಂಪನ್ನರು ಅಂತಾ ಗೊತ್ತಿರಲಿಲ್ಲ. ಅವರ ಭೇಟಿಯಿಂದ ರಾಜ್ಯಕ್ಕೆ ಅನುಕೂಲವಾಗುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು