ಬುಧವಾರ, ಅಕ್ಟೋಬರ್ 20, 2021
28 °C

‌ಮಹದೇಶ್ವರ ಬೆಟ್ಟ: 80 ಟನ್‌ ಹೆಚ್ಚುವರಿ ಅಕ್ಕಿ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಕೋವಿಡ್‌ ಕಾರಣಕ್ಕೆ ಹಲವು ತಿಂಗಳುಗಳಿಂದ ದಾಸೋಹ ನಡೆಯದಿರುವುರಿಂದ ದಾಸ್ತಾನು ಕೊಠಡಿಯಲ್ಲಿದ್ದ 80 ಟನ್‌ ಹೆಚ್ಚುವರಿ ಅಕ್ಕಿಯನ್ನು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಇ–ಟೆಂಡರ್ ಮೂಲಕ ಮಾರಾಟ ಮಾಡಿದೆ. 

ಟೆಂಡರ್‌ನಲ್ಲಿ ಪ್ರತಿ ಕೆಜಿ ಅಕ್ಕಿಗೆ ಗರಿಷ್ಠ ₹19.60ರಂತೆ ನಿಗದಿಯಾಗಿದ್ದು, 80 ಟನ್‌ ಅಕ್ಕಿಯ ಮೊತ್ತ ₹15.68 ಲಕ್ಷ ಪ್ರಾಧಿಕಾರದ ದಾಸೋಹ ಖಾತೆಗೆ ಜಮೆ ಆಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

‘ದಾಸೋಹ ನಡೆಯದೇ ಇರುವುದರಿಂದ ಅಕ್ಕಿಯನ್ನು ಸಂರಕ್ಷಿಸುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಾರಾಟ ಮಾಡಲಾಗಿದೆ. ಈವರೆಗೂ 69,637 ಕೆಜಿ ಅಕ್ಕಿ ವಿಲೇವಾರಿಯಾಗಿದ್ದು, ಇನ್ನು 10,363 ಕೆಜಿ ವಿಲೇವಾರಿಗೆ ಬಾಕಿ ಇದೆ’ ಎಂದು ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.