ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಹಿಜಾಬ್‌ ತೀರ್ಪು: ಮುಸ್ಲಿಂ ವಿದ್ಯಾರ್ಥಿನಿಯರ ಪ್ರತಿಭಟನೆ

Last Updated 16 ಮಾರ್ಚ್ 2022, 11:38 IST
ಅಕ್ಷರ ಗಾತ್ರ

ಚಾಮರಾಜನಗರ: ತರಗತಿಗಳಲ್ಲಿ ಹಿಜಾಬ್‌ ಧರಿಸುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಂಗಳವಾರ ನೀಡಿರುವ ತೀರ್ಪನ್ನು ಖಂಡಿಸಿ ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು.

ಹಿಜಾಬ್‌ ಧರಿಸಲು ಅವಕಾಶ ನೀಡದಿದ್ದರೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ಅವರು ಹೇಳಿದರು.

ಬುಧವಾರ ಬೆಳಿಗ್ಗೆ ಕಾಲೇಜಿನ ಆವರಣದಲ್ಲಿ ಸೇರಿದ 12ಕ್ಕೂ ಹೆಚ್ಚು ಪಿಯು ವಿದ್ಯಾರ್ಥಿನಿಯರು, ‘ಹೈಕೋರ್ಟ್‌ ತೀರ್ಪು ನೀಡಿದೆ; ನ್ಯಾಯ ನೀಡಿಲ್ಲ’, ‘ಹಿಜಾಬ್‌ ನನ್ನ ಹೆಮ್ಮೆ, ನನ್ನ ಆಯ್ಕೆ, ನನ್ನ ಸ್ವಾತಂತ್ರ್ಯ’, ‘ನಮ್ಮ ಹಕ್ಕು ನಮಗೆ ವಾಪಸ್‌ ಬೇಕು’ ಸೇರಿದಂತೆ ವಿವಿಧ ಘೋಷಣೆಗಳನ್ನು ಬರೆದಿದ್ದ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟಿಸಿದರು.

ಪರೀಕ್ಷೆ ಬರೆಯುದಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಖುತೇಜಾ, ಹೀನಾ ಕೌಸರ್‌ ಹಾಗೂ ಇತರರು ‘ಹೈಕೋರ್ಟ್‌ನ ತೀರ್ಪಿನಿಂದ ನಿರಾಸೆಯಾಗಿದೆ. ಇದನ್ನು ನಾವು ಒಪ್ಪುವುದಿಲ್ಲ. ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’ ಎಂದರು.

‘ನಮ್ಮ ಸಾಂವಿಧಾನಿಕ ಹಕ್ಕುಗ‌ಳಿಗಾಗಿ ಹೈಕೋರ್ಟ್‌ಗೆ ಹೋಗಿದ್ದೆವು. ಆದರೆ, ಹಿಜಾಬ್‌ ಇಸ್ಲಾಂನ ಅತ್ಯಾವಶ್ಯಕ ಧಾರ್ಮಿಕ ಆಚರಣೆಯಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿರುವುದು ಬೇಸರ ಉಂಟು ಮಾಡಿದೆ‘ ಎಂದರು.

‘ಪೂರ್ವಸಿದ್ಧತಾ ಪರೀಕ್ಷೆಗೂ ಮೊದಲಿನಿಂದ ನಾವು ತರಗತಿಗೆ ಹೋಗುತ್ತಿಲ್ಲ. ಹಿಜಾಬ್‌ ಹಾಕಿಕೊಂಡುಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಬರೆಯಲು ಅವಕಾಶ ಕೊಟ್ಟಿದ್ದರು. ಹಾಗಾಗಿ, ಪರೀಕ್ಷೆ ಬರೆದಿದ್ದೇವೆ. ವಾರ್ಷಿಕ ಪರೀಕ್ಷೆಯಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ. ಒಂದು ವೇಳೆ ಹಿಜಾಬ್‌ಗೆ ಅವಕಾಶ ನೀಡದಿದ್ದರೆ ನಾವು ಪರೀಕ್ಷೆ ಬರೆಯುವುದಿಲ್ಲ’ ಎಂದು ವಿದ್ಯಾರ್ಥಿನಿಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT