ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್‌: ಚಾಮರಾಜನಗರ ಜಿಲ್ಲೆಯಾದ್ಯಂತ ಸಂಭ್ರಮದ ಆಚರಣೆ

ಮಸೀದಿ, ಈದ್ಗಾ ಮೈದಾನಗಳಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯ
Published 29 ಜೂನ್ 2023, 13:19 IST
Last Updated 29 ಜೂನ್ 2023, 13:19 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಮುಸ್ಲಿಮರು ಗುರುವಾರ ಬಕ್ರೀದ್‌ (ಈದ್‌ ಉಲ್‌ ಅಧಾ) ಹಬ್ಬವನ್ನು ಸಂಭ್ರಮ, ಶ್ರದ್ಧೆಯಿಂದ ಆಚರಿಸಿದರು. 

ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರು, ವೃದ್ಧರು ಮನೆಗಳಲ್ಲೇ ವಿಶೇಷ ಪ್ರಾರ್ಥನೆ ಮಾಡಿದರು. ಕುರ್‌ ಅನ್‌ ಪಠಿಸಿದರು. 

ಹಬ್ಬದ ಅಂಗವಾಗಿ ಹೊಸ ಬಟ್ಟೆ ಧರಿಸಿದ್ದ ಪುರುಷರು, ಮಕ್ಕಳು ಪರಸ್ಪರ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ರಾಜಕೀಯ ಮುಖಂಡರು ಕೂಡ ಮಸೀದಿ, ಈದ್ಗಾ ಮೈದಾನಗಳಿಗೆ ಭೇಟಿ ನೀಡಿ, ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು. 

ಆರ್ಥಿಕವಾಗಿ ಸದೃಢರಾಗಿರುವವರು ಸಮುದಾಯದ ಬಡ ಬಗ್ಗರಿಗೆ ದಾನ ಮಾಡಿದರು. 

ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಹಿಂಭಾದ ಈದ್ಗಾ ಮೈದಾನ ಮತ್ತು ಸೋಮವಾರ ಪೇಟೆ ಸಮೀಪದ ಅಹಲೇ ಹದೀಶ ಈದ್ಗಾ ಮೈದಾನದಲ್ಲಿ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಲಾಗಿತ್ತು. 

ಸಾವಿರಾರು ಪುರುಷರು, ಮಕ್ಕಳು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಸೋಮವಾರ ಪೇಟೆಯಲ್ಲಿ ಮಹಿಳೆಯೂ ಪ್ರಾರ್ಥನೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಶಾಹಿದ ಶೆಲ್ಫಿ ಅವರು, ‘ಈ ಹಬ್ಬವು ತ್ಯಾಗ ಬಲಿದಾನದ ಸಂಕೇತ. ನಮ್ಮ ಜೀವನದಲ್ಲಿ ತ್ಯಾಗ, ಬಲಿದಾನ ಎಲ್ಲ ಸಂದರ್ಭಗಳಲ್ಲೂ ಇರಬೇಕು. ಅದನ್ನು ಕಟ್ಟುನಿಟ್ಟಾಗಿ ಪರಿಪಾಲಿಸಬೇಕು. ತ್ಯಾಗ, ಬಲಿದಾನ ಸೌಹರ್ದತೆಯ ಸಂಕೇತ. ಇಡೀ ಮಾನವ ಕುಲವನ್ನು ರಕ್ಷಿಸಬೇಕು ಎಂಬುದು ಇದರ ಉದ್ದೇಶ’ ಎಂದರು. 

ಮೌಲ್ವಿಗಳು, ಮಸೀದಿಗಳ ಆಡಳಿತ ಮಂಡಳಿ ಸದಸ್ಯರು, ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಕ್ರೀದ್‌ ಹಬ್ಬದ ಅಂಗವಾಗಿ ಚಾಮರಾಜನಗರದ ಸೋಮವಾರಪೇಟೆ ಸಮೀಪದ ಅಹಲೇ ಹದೀಶ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಬಕ್ರೀದ್‌ ಹಬ್ಬದ ಅಂಗವಾಗಿ ಚಾಮರಾಜನಗರದ ಸೋಮವಾರಪೇಟೆ ಸಮೀಪದ ಅಹಲೇ ಹದೀಶ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಚಾಮರಾಜನಗರದಲ್ಲಿ ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಇಬ್ಬರು ಚಿಣ್ಣರು ಪರಸ್ಪರ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು
ಚಾಮರಾಜನಗರದಲ್ಲಿ ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಇಬ್ಬರು ಚಿಣ್ಣರು ಪರಸ್ಪರ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು

Cut-off box - ಕುರ್ಬಾನಿ ಆಚರಣೆ ಬಕ್ರೀದ್‌ ಹಬ್ಬದಲ್ಲಿ ಬಲಿ ಅಥವಾ ಕುರ್ಬಾನಿಗೆ ವಿಶೇಷ ಪ್ರಾಶಸ್ತ್ಯವಿದೆ. ಕುರಿ ಮೇಕೆ ಟಗರುಗಳನ್ನು ಕುರ್ಬಾನಿ ಕೊಟ್ಟು ಅವುಗಳ ಮಾಂಸದಿಂದ ವಿಶೇಷ ಭಕ್ಷ್ಯ ತಯಾರಿಸಿದರು. ಸ್ನೇಹಿತರು ಸಂಬಂಧಿಕರನ್ನು ಮನೆಗಳಿಗೆ ಆಮಂತ್ರಿಸಿ ಹಬ್ಬದ ಊಟವನ್ನು ಬಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT