ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನ ಕ್ಷೇತ್ರದಲ್ಲೂ ಭಕ್ತಸಾಗರ

ಮಂಗಳವಾರವೇ ದೂರ‌ದ ಊರುಗಳಿಂದ ಬೆಟ್ಟಕ್ಕೆ ಬಂದಿದ್ದ ಭಕ್ತರು
Last Updated 1 ಜನವರಿ 2020, 15:23 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಸಾವಿರಾರು ಭಕ್ತರು ‘ಉಘೇ ಉಘೇ ಮಾದಪ್ಪ’ ಎಂಬ ಘೋಷಣೆ ಕೂಗುತ್ತಾ ಹೊಸ ವರ್ಷವನ್ನು ಸ್ವಾಗತಿಸಿದರು.

2020ರ ಮೊದಲ ದಿನ ಸಾವಿರಾರು ಭಕ್ತರು ಮಾದಪ್ಪನ ದರ್ಶನ ಪಡೆದು ತಮ್ಮ ಹರಕೆಗಳನ್ನು ತೀರಿಸಿದರು.ಹೊಸ ವರ್ಷದಂದು ಸ್ವಾಮಿಯ ದರ್ಶನ ಪಡೆಯುವುದಕ್ಕಾಗಿ ಭಕ್ತರು ಮಂಗಳವಾರವೇ ಬೆಟ್ಟಕ್ಕೆ ಬಂದಿದ್ದರು.

ಹಲವು ಭಕ್ತರು ವಾಹನಗಳಲ್ಲಿ ಬಂದಿದ್ದರೆ, ಇನ್ನೂ ಕೆಲವರು ಕಾಲ್ನಡಿಗೆಯಲ್ಲೇ ಬೆಟ್ಟವನ್ನು ತಲುಪಿದ್ದರು.ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಬಂದಿದ್ದ ಭಕ್ತರು ರಾತ್ರಿ 12 ಗಂಟೆಯವರೆಗೂ ದೇವಾಲಯದ ಮುಂದೆ ಕುಳಿತು, ಮಹದೇಶ್ವರ ಸ್ವಾಮಿಯನ್ನು ಸ್ಮರಿಸುತ್ತಾ ಹೊಸ ವರ್ಷವನ್ನು ಸ್ವಾಗತಿಸಿದರು.

ಹೊಸ ವರುಷದಲ್ಲಿ ಉತ್ತಮ ಮಳೆ ಬೆಳೆ ಚೆನ್ನಾಗಿ ಆಗಿ ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಕೆಲವು ಭಕ್ತರು ಹರಕೆಗಳನ್ನು ಕಟ್ಟಿಕೊಂಡರೆ, ಮತ್ತೆ ಕೆಲವರು ಉರುಳುಸೇವೆ ಪಂಜಿನ ಸೇವೆ, ವಾಹನ ಉತ್ಸವಗಳನ್ನು ಮಾಡುವುದರ ಮೂಲಕ ವರ್ಷದ ಕೊನೆಯ ಹರಕೆಗಳನ್ನು ನೆರವೇರಿಸಿದರು.

ವ್ಯವಸ್ಥೆ: ಭಕ್ತರ ಅನುಕೂಲಕ್ಕಾಗಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ವ್ಯವಸ್ಥೆ ಮಾಡಿತ್ತು. ದರ್ಶನ, ಲಾಡು ಪ್ರಸಾದ ವಿತರಣೆಗೆ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಭಕ್ತರು ದೇವರ ದರ್ಶನಕ್ಕಾಗಿ ಸುಡು ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT