ಹಳೇ ವರ್ಷಕ್ಕೆ ವಿದಾಯ, ಹೊಸ ವರ್ಷಕ್ಕೆ ಸ್ವಾಗತ
ಬೆಂಗಳೂರು: ಎರಡು ವರ್ಷಗಳ ಬಳಿಕ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಶನಿವಾರ ರಾತ್ರಿ ಎಲ್ಲೆಡೆಯು ಯುವಪಡೆಯ ಹರ್ಷೋದ್ಗಾರ ಹಾಗೂ ಕೇಕೆ– ಶಿಳ್ಳೆ ಹೆಚ್ಚಿತ್ತು. ಹೊಸ ವರ್ಷ ಸ್ವಾಗತಿಸಿದ ಜನ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು...
ಕೋವಿಡ್ ಕಾರಣದಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆಗೆ ಎರಡು ವರ್ಷ ನಿರ್ಬಂಧವಿತ್ತು. ಈ ವರ್ಷ ಎಲ್ಲವನ್ನೂ ಮರೆತು ಜನರು ಸಂಭ್ರಮದಲ್ಲಿ ಮಿಂದೆದ್ದರು.
ರಾತ್ರಿ 12ರ ದಾಟುತ್ತಿದ್ದಂತೆಯೇ ನಗರದಲ್ಲಿ 2023 ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹೊಸ ವರ್ಷ ಸ್ವಾಗತಿಸಿದರು. ಕೆಲವೆಡೆ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡರು.Last Updated 31 ಡಿಸೆಂಬರ್ 2022, 21:27 IST