ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚಾಮರಾಜೇಶ್ವರ ಸ್ವಾಮಿ ಜಾತ್ರೆ ರದ್ದು

ನಾಲ್ಕು ವರ್ಷಗಳಿಂದ ಇಲ್ಲ ರಥೋತ್ಸವ, ಕೋವಿಡ್‌ನಿಂದಾಗಿ ಈ ಬಾರಿ ದರ್ಶನವೂ ಇಲ್ಲ
Last Updated 4 ಜುಲೈ 2020, 16:10 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ದಿನ ಈ ಬಾರಿ ಭಾನುವಾರ (ಜುಲೈ 5) ನಡೆಯಬೇಕು.

2017ರಲ್ಲಿ ರಥಕ್ಕೆ ಬೆಂಕಿ ಬಿದ್ದ ನಂತರ ರಥೋತ್ಸವ ಸ್ಥಗಿತಗೊಂಡಿದ್ದು, ಹೊಸ ರಥ ನಿರ್ಮಾಣ ಕಾರ್ಯ ಆಗದೇ ಇರುವುದರಿಂದ ನಾಲ್ಕು ವರ್ಷಗಳಿಂದ ರಥೋತ್ಸವ ನಡೆಯುತ್ತಿರಲಿಲ್ಲ. ಹಾಗಿದ್ದರೂ ನೂರಾರು ಭಕ್ತರು ರಥೋತ್ಸವದ ದಿನ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಹೋಗುತ್ತಿದ್ದರು.

ಆದರೆ, ಈ ಬಾರಿ ಕೋವಿಡ್‌–19 ಕಾರಣಕ್ಕೆ ಜನರನ್ನು ನಿಯಂತ್ರಿಸುವುದಕ್ಕಾಗಿ ರಥೋತ್ಸವದ ದಿನ ದೇವಸ್ಥಾನಕ್ಕೆ ಬರುವ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಹಾಗಾಗಿ, ಈ ವರ್ಷ ಚಾಮರಾಜೇಶ್ವರ ಸ್ವಾಮಿಯ ಜಾತ್ರೆ ರದ್ದಾಗಿದೆ. ದೇವಾಲಯದ ಮಟ್ಟಿಗೆ ಮಾತ್ರ ರಥೋತ್ಸವ ದಿನದ ಪೂಜೆಗಳು ನಡೆಯಲಿವೆ.

ವಿಶೇಷ ಜಾತ್ರೆ: ಆಷಾಢ ಮಾಸದಲ್ಲಿ ರಥೋತ್ಸವ ನಡೆಯುವುದು ಈ ದೇವಾಲಯದ ವಿಶೇಷ.ಜಾತ್ರೆಯ ದಿನದಂದು ಜಿಲ್ಲೆಯ, ಹೊರ ಜಿಲ್ಲೆಗಳ ಸಾವಿರಾರು ನವ ದಂಪತಿ ದೇವಸ್ಥಾನಕ್ಕೆ ಬಂದು ಹರಕೆ ಒಪ್ಪಿಸುವುದು ವಾಡಿಕೆ.

ಸದ್ಯ, ₹1 ಕೋಟಿ ವೆಚ್ಚದಲ್ಲಿ ರಥದ ನಿರ್ಮಾಣ ಕಾರ್ಯ ಆರಂಭವಾಗಿದೆ. ಮುಂದಿನ ಜಾತ್ರೆಯ ವೇಳೆಗೆ ರಥ ಸಿದ್ಧವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT