ಭಾನುವಾರ, ಆಗಸ್ಟ್ 14, 2022
25 °C

ಶತಕ ದಾಟಿದ ಪೆಟ್ರೋಲ್‌ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಜ್ಯದ ವಿವಿಧ ಕಡೆಗಳಲ್ಲಿ ₹ 100 ದಾಟಿದ್ದ ಲೀಟರ್‌ ಪೆಟ್ರೋಲ್‌ ಬೆಲೆ ನಗರದಲ್ಲಿ ಬುಧವಾರ ಶತಕ ತಲುಪಿದೆ. 

ಚಾಮರಾಜನಗರದಲ್ಲಿ ಬುಧವಾರ ಪೆಟ್ರೋಲ್‌ ಬೆಲೆ ₹ 100.02 ಇದ್ದರೆ, ಡೀಸೆಲ್‌ ಬೆಲೆ ₹ 92.79 ಇತ್ತು. ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಕಾಣುತ್ತಲೇ ಇದೆ. 

ಚಾಮರಾಜನಗರ ಬಿಟ್ಟು ಜಿಲ್ಲೆಯ ಬೇರೆ ಕಡೆಗಳಲ್ಲಿ ಬೆಲೆ ಶತಕ ದಾಟಿಲ್ಲ. 100ರ ಅಂಚಿನಲ್ಲಿದೆ. ಕೊಳ್ಳೇಗಾಲ, ಹನೂರು ಭಾಗಗಳಲ್ಲಿ ಬುಧವಾರ ಲೀಟರ್‌ ಪೆಟ್ರೋಲ್‌ ಬೆಲೆ ₹ 99.99 ಇತ್ತು. ಯಳಂದೂರಿನಲ್ಲಿ ₹ 100ಕ್ಕೆ 13 ಪೈಸೆ ಕಡಿಮೆ ಇದೆ. ಗುಂಡ್ಲುಪೇಟೆಯಲ್ಲಿ ₹ 99.93 ಇತ್ತು. ಗುರುವಾರ ಇಲ್ಲೂ ಶತಕದ ಗಡಿ ದಾಟುವ ನಿರೀಕ್ಷೆ ಇದೆ.

ನಾಲ್ಕು ತಾಲ್ಲೂಕುಗಳಲ್ಲಿ ಡೀಸೆಲ್‌ ಬೆಲೆ ₹ 92.70ರ ಆಸುಪಾಸಿನಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು