ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ಫೊನ್-ಇನ್ ಕಾರ್ಯಕ್ರಮ: ಗ್ರಾಮೀಣ ಭಾಗಗಳಿಂದ ದೂರುಗಳ ಸುರಿಮಳೆ

32 ಮಂದಿಯಿಂದ ಕರೆ, ಸಮಸ್ಯೆಗಳ ವಿವರಣೆ
Last Updated 21 ಸೆಪ್ಟೆಂಬರ್ 2019, 14:48 IST
ಅಕ್ಷರ ಗಾತ್ರ

ಚಾಮರಾಜನಗರ:ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದಿಂದ ಶನಿವಾರ ಆಯೋಜಿಸಿದ್ದನೇರಫೋನ್-ಇನ್ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 32 ಮಂದಿ ಕರೆ ಮಾಡಿ, ತಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತದ ಅಧಿಕಾರಿಗಳ ಮುಂದೆ ಹೇಳಿಕೊಂಡರು. ಬಹುತೇಕ ಕರೆಗಳು ಗ್ರಾಮೀಣ ಪ್ರದೇಶಗಳಿಂದ ಬಂದಿದ್ದವು.

ಗ್ರಾಮ ಪಂಚಾಯಿತಿ, ರಸ್ತೆ ಹಾಗೂ ಒಳಚರಂಡಿ ಸರಿಪಡಿಸುವುದು, ವೃದ್ಧಾಪ್ಯ ವೇತನ, ಮನೆ ಮಂಜೂರು, ಬಸ್‌ ವ್ಯವಸ್ಥೆ,ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಕೊರತೆ, ಇ-ಸ್ವತ್ತು ಮತ್ತು ಪಹಣಿ ದೊರೆಯದಿರುವಿಕೆ ಸೇರಿದಂತೆ ಜನರು ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು.

ಗುಂಡ್ಲುಪೇಟೆ ತಾಲ್ಲೂಕು ತೆರಕಣಾಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರುಗೇಶ್ ಎಂಬುವರು ಕರೆ ಮಾಡಿ, ‘70 ವರ್ಷದ ಹಳೆ ಮನೆ ನಮ್ಮದು. ಮನೆ ಮಂಜೂರು ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಮನೆ ಮಂಜೂರು ಆಗಿಲ್ಲ’ ಎಂದರು.

ಅದೇ ಗ್ರಾಮದ ಸಿದ್ದಪ್ಪಾಜಿ ಅವರು ಕರೆ ಮಾಡಿ, ‘ತೆರಕಣಾಂಬಿ ಗ್ರಾಮದ ಅಂಚೆ ಕಚೇರಿಯಲ್ಲಿ ವೃದ್ಧಾಪ್ಯ ವೇತನ ನೀಡುವಾಗ ₹ 20 ಕಡಿತ ಮಾಡಿ ನೀಡುತ್ತಿದ್ದಾರೆ’ ಎಂದು ದೂರಿದರು.

ತೆರಕಣಾಂಬಿ ಗ್ರಾಮದ ಮಾದವಿ ಎಂಬುವವರು ಕರೆ ಮಾಡಿ, ‘20 ವರ್ಷಗಳಿಂದ ಗ್ರಾಮದ ಹೊರಗೆ ಮೂಲೆಯಲ್ಲಿ ಅಂಚೆ ಕಚೇರಿ ಇದೆ. ವೃದ್ಧರು, ಜನರು ನಿತ್ಯವೂ ದೂರವಿರುವ ಅಂಚೆ ಕಚೇರಿಗೆನಡೆದುಕೊಂಡೆ ಹೋಗಬೇಕು. ಆದ್ದರಿಂದ ಮುಖ್ಯರಸ್ತೆಯ ಸಮೀಪಕ್ಕೆ ಅಂಚೆ ಕಚೇರಿಯನ್ನು ಸ್ಥಳಾಂತರಿಸಬೇಕು’ ಎಂದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಮನೆ ಮಂಜೂರು ಸಂಬಂಧಪಟ್ಟಂತೆ ಗ್ರಾಮದ ಪಿಡಿಒ ಅವರಿಗೆ ಸೂಚಿಸಲಾಗುವುದು. ಅಂಚೆ ಕಚೇರಿ ಸಮಸ್ಯೆ ಕುರಿತು ವೃದ್ಧಾಪ್ಯ ವೇತನ ಕಡಿತಗೊಳಿಸಿ ನೀಡುತ್ತಿರುವುದರ ಬಗ್ಗೆ ತನಿಖೆ ನಡೆಸಲು ಹಾಗೂ ಅಂಚೆ ಕಚೇರಿ ಸ್ಥಳಾಂತರಕ್ಕೆ ಸೂಪರಿಡೆಂಟ್‌ ಕಚೇರಿ ನಂಜನಗೂಡು ವಿಭಾಗಕ್ಕೆ ಮಾಹಿತಿ ತಿಳಿಸಲು ಹೇಳುತ್ತೇನೆ’ ಎಂದು ಭರವಸೆ ನೀಡಿದರು.

ತಾಲ್ಲೂಕಿನ ಬಸವಾಪುರ ಗ್ರಾಮದ ಬಾಲಸುಬ್ರಮಣ್ಯ ಕರೆ ಮಾಡಿ, ‘ಚಿಕ್ಕಹೊಳೆಜಲಾಶಯದಿಂದ ಹಾದು ಹೋಗಿರುವ ಕಾಲುವೆ ನೀರು ಸಮರ್ಪಕವಾಗಿಎಲ್ಲ ಜಮೀನಿಗೆಪೂರೈಕೆ ಆಗುತ್ತಿಲ್ಲ. ಅಣೆಕಟ್ಟು ಪ್ರದೇಶದಿಂದ 8 ಕಿ.ಮೀ ದೂರ ಇರುವ ನಮ್ಮಜಮೀನಿಗೆನೀರು ಸಿಗುತ್ತಿಲ್ಲ. ಕೂಡಲೇ, ಕಾಲುವೆ ಮೂಲಕ ನೀರು ಹರಿಸಲು ಕ್ರಮವಹಿಸಬೇಕು’ ಎಂದುಮನವಿ ಮಾಡಿದರು.

ಕಾವೇರಿ ಅವರು ಮಾತನಾಡಿ, ‘ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ನಿಯೋಜಿಸಿ ಪರಿಶೀಲಿಸಲಾಗುವುದು’ ಎಂದುತಿಳಿಸಿದರು.

ಅಕ್ರಮ ಮರಳು ಗಣಿಗಾರಿಕೆ: ಚಂದಕವಾಡಿ ಗ್ರಾಮದ ಮಾದೇವಪ್ಪ ಎಂಬುವವರು ಕರೆ ಮಾಡಿ, ‘ಕೋಡಿಮೊಳೆ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿರಾತ್ರಿಸಮಯದಲ್ಲಿಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ ಸಾಗಣೆ ಮಾಡಲಾಗುತ್ತಿದೆ.ಇದುಅನೇಕ ದಿನಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು’ ಎಂದರು.

‘ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲಿಸುವಂತೆ ತಿಳಿಸಲಾಗುವುದು’ ಎಂದು ಕಾವೇರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಬೈಕ್‌ ಕಳ್ಳತನ: ಸೂಕ್ತ ತನಿಖೆಗೆ ಮನವಿ

‘ಕೊಳ್ಳೇಗಾಲದಲ್ಲಿ ಇತ್ತೀಚೆಗೆ ಬೈಕ್‌ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿಸಿರುವ ಆರೋಪಿಗಳಲ್ಲಿ ಸೈಯದ್‌ ಗಯಾಜ್‌ ಎಂಬಾತನನ್ನು ಮೊದಲ ಆರೋಪಿಯನ್ನಾಗಿ ಮಾಡಬೇಕು. ಇವನುಚಿಕ್ಕಮಕ್ಕಳನ್ನು ಇರಿಸಿಕೊಂಡುಬೈಕ್‌ಗಳನ್ನು ಕಳ್ಳತನ ಮಾಡಿಸುತ್ತಾನೆ.20 ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದಾನೆ. ಬಡವರ ಬೈಕ್‌ ಕಳ್ಳತನವಾಗಿವೆ. ಸೂಕ್ತ ತನಿಖೆಯಾಗಬೇಕು’ ಎಂದು ಕೊಳ್ಳೇಗಾಲದಿಂದ ಕರೆ ಮಾಡಿದ್ದ ಹೆಸರು ಹೇಳದೆವ್ಯಕ್ತಿಯೊಬ್ಬರು ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಅವರಿಗೆ ತಿಳಿಸಿದರು.

ಎಸ್‌ಪಿ ಎಚ್‌.ಡಿ.ಆನಂದ ಕುಮಾರ್‌ ಮಾತನಾಡಿ, ‘ಈಗ 10 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿ ಹಿಂದೆ ಕಳ್ಳತನ ಮಾಡಿದ ಬೈಕ್‌ಗಳ ಪತ್ತೆಗೂ ಮುಂದಾಗುತ್ತೇವೆ. ಯಾರುಮೊದಲ ಆರೋಪಿ ಎನ್ನುವುದು ತನಿಖೆ ಬಳಿಕ ತಿಳಿಯಲಿದೆ’ ಎಂದು ತಿಳಿಸಿದರು.

ಬಸ್‌ ವ್ಯವಸ್ಥೆ: ನಗರದ ಹೊರವಲಯದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿ ಅಶ್ವಿನಿ ಕರೆ ಮಾಡಿ, ‘ನಗರದ ಹೊರವಲಯದಲ್ಲಿರುವನಮ್ಮ ಕೇಂದ್ರದಿಂದ ಸಂಜೆಯ ಸಮಯದಲ್ಲಿ ನಗರಕ್ಕೆ ವಾಪಸಾಗಲು ಕೇವಲ ಎರಡು ಬಸ್‌ಗಳನ್ನು ಮಾತ್ರನಿಯೋಜಿಸಲಾಗಿದೆ. ಈ ಮಾರ್ಗದ ನಡುವೆ ಸಂಚಾರ ಮಾಡುವ ವಿದ್ಯಾರ್ಥಿನಿಯರಸಂಖ್ಯೆ ಕೂಡ ಹೆಚ್ಚಿದೆ. ಆದ್ದರಿಂದ, ಮತ್ತೊಂದು ಬಸ್‌ನಿಯೋಜಿಸಬೇಕು’ ಎಂದುಮನವಿ ಮಾಡಿದರು.

ಕಾವೇರಿ ಅವರು ಕೂಡಲೇ ಬಸ್‌ವ್ಯವಸ್ಥೆ ಕಲ್ಪಿಸಲುಕಾರ್ಯಕ್ರಮದಲ್ಲಿಹಾಜರಿದ್ದಕೆಎಸ್ಆರ್‌ಟಿಸಿ ವಿಭಾಗೀಯ ಅಧಿಕಾರಿಗೆ ಸೂಚಿಸಿದರು.

25ರಂದು ಸಚಿವರ ಭೇಟಿ:ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಸೆ.25ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ. ಅವರು ಬರುವ ಮುಂಚೆ ನಿಮ್ಮ ವ್ಯಾಪ್ತಿಯಲ್ಲಿ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಾವೇರಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT