ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬಾಲಕಿ ಗರ್ಭಿಣಿ: ಪತಿ ವಿರುದ್ದ ಪೋಕ್ಸೊ ಪ್ರಕರಣ

Published 15 ಫೆಬ್ರುವರಿ 2024, 7:01 IST
Last Updated 15 ಫೆಬ್ರುವರಿ 2024, 7:01 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಗಿರಿಜನ ಸಮುದಾಯಕ್ಕೆ ಸೇರಿದ ಏಳನೇ ತರಗತಿ ಬಾಲಕಿ ಗರ್ಭಿಣಿಯಾಗಿದ್ದು, ಈ ಸಂಬಂಧ ಬುಧವಾರ ಪತಿಯ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬಾಲಕಿಗೆ 15 ವರ್ಷ ವಯಸ್ಸಾಗಿದ್ದು, ಅಜ್ಜಿ ಆರೈಕೆಯಲ್ಲಿ ಓದುತ್ತಿದ್ದಳು. ತಂದೆ ಕೂಲಿ ಕೆಲಸ ಮಾಡುತ್ತ ಹೊರಗೆ ಇರುತ್ತಿದ್ದರು. ಕಳೆದ ವರ್ಷ ಬಾಲಕಿಗೆ ವಿವಾಹ ಮಾಡಿದ್ದರು ಎನ್ನಲಾಗಿದೆ.

ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ 7 ತಿಂಗಳ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಬಾಲಕಿಯನ್ನು ಮಕ್ಕಳ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ.

ಶಿಶು ಅಭಿವೃದ್ಧಿ ಇಲಖೆಯ ಮೇಲ್ವಿಚಾರಕಿ ಸರಸ್ವತಿ ನೀಡಿದ ದೂರಿನ ಅನ್ವಯ ಪಟ್ಟಣ ಠಾಣೆಯಲ್ಲಿ ಪತಿ ವಿರುದ್ದ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT