ಕೊಳ್ಳೇಗಾಲ: ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳನ್ನು ಖಂಡಿಸಿ ಹಾಗೂ ಪಿಂಚಣಿ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಮಹಿಳೋದಯ ಮಹಿಳಾ ತಾಲ್ಲೂಕು ಒಕ್ಕೂಟದ ವತಿಯಿಂದ ಶನಿವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ನ್ಯಾಷನಲ್ ಮಿಡ್ಲಿ ಶಾಲೆಯ ಆವರಣದಲ್ಲಿ ಸಮಾವೇಶಗೊಂಡ ಸಂಸ್ಥೆಯ ಪದಾಧಿಕಾರಿಗಳು ಮೆರವಣಿಗೆಯ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ ಗ್ರೇಡ್ 2 ತಹಶೀಲ್ದಾರ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.

ಇದುವರೆಗೂ ರಾಜ್ಯದಲ್ಲಿ ಸುಮಾರು 340 ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ನಡೆದಿದೆ. 3,089 ಪೋಕ್ಸೊ ಪ್ರಕರಣಗಳು ಮತ್ತು 3,643 ಲೈಂಗಿಕ ಕಿರುಕುಳ ಪ್ರಕರಣಗಳು, ಸುಮಾರು 25 ಸಾವಿರ ಬಾಲಕಿಯರು ಗರ್ಭಿಣಿಯರಾಗಿರುವ ಪ್ರಕರಣಗಳು ದಾಖಲಾಗಿವೆ. ಇನ್ನೂ ಅದೆಷ್ಟೋ ಪ್ರಕರಣಗಳು ಕಾರಣಾಂತರಗಳಿಂದ ದಾಖಲಾಗದೆ ಉಳಿದಿವೆ. ದಾಖಲಾದ ಪ್ರಕರಣಗಳು ಇನ್ನೂ ಸರಿಯಾಗಿ ಇತ್ಯಾರ್ಥವಾಗದೆ ಉಳಿದಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ಉಸಿರುಗಟ್ಟುವ ಭಯದ ವಾತಾವರಣದಲ್ಲಿ ಬದುಕವಂತಾಗಿದೆ ಎಂದರು.

ಅತ್ಯಾಚಾರಿಗಳು ಮತ್ತು ಕೊಲೆ ಮಾಡಿದ ಅರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು. ಮಹಿಳೆಯರ ಮೇಲಿನ ಹೀನ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇ ಎಂದು ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಹಿಳೋದಯ ಮಹಿಳಾ ತಾಲ್ಲೂಕು ಒಕ್ಕೂಟ ಅಧ್ಯಕ್ಷರಾದ ರಾಜಮ್ಮ.ಎಂ, ಕಾರ್ಯದರ್ಶಿ ಸಿದ್ದರಾಜಮ್ಮ ಎಂ, ಉಪಾಧ್ಯಕ್ಷರಾದ ಶಿವಮ್ಮ, ಶೋಭಾ, ಸೌಜನ್ಯ, ವಲಯ ಅಧಿಕಾರಿ ಸಂಯೋಜಕರಾದ ನಾಗಸುಂದರ, ಕಾರ್ಯಕರ್ತರಾದ ಫಿಲೋಮಿನ, ಉಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.