ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಳಿಗಿರಿಬೆಟ್ಟ, ಯಳಂದೂರು ಸುತ್ತಮುತ್ತ ವರ್ಷಧಾರೆ

Published : 10 ಮೇ 2024, 5:07 IST
Last Updated : 10 ಮೇ 2024, 5:07 IST
ಫಾಲೋ ಮಾಡಿ
Comments

ಯಳಂದೂರು: ಯಳಂದೂರು ಪಟ್ಟಣ ಹಾಗೂ ಬಿಳಿಗಿರಿರಂಗಬೆಟ್ಟದ ಸುತ್ತಮುತ್ತ ಗುರುವಾರ ಸಂಜೆ ವರ್ಷಧಾರೆ ಆಯಿತು. ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮೊದಲ ಮಳೆ ಭೂಮಿಗೆ ತಂಪೆರೆಯಿತು.

ಕಳೆದೊಂದು ವಾರದಿಂದ ಮೋಡಗಳು ಇದ್ದರು, ಮಳೆ ಬರುವ ನಿರೀಕ್ಷೆ ಮೂಡಿಸಿರಲಿಲ್ಲ. ಬಿರು ಬಿಸಿಲಿನ ಧಗೆಗೆ ಜನರು ತತ್ತರಿಸಿದ್ದರು. ಸಂಜೆ ಮಳೆ ಜೋರಾಗಿ ಸುರಿಯಿತು.

ಮಳೆಯಿಂದಾಗಿ ವಿವಿಧೆಡೆ ತೆರಳುವ ಪ್ರಯಾಣಿಕರು, ಸರ್ಕಾರಿ ನೌಕರರು ಬಸ್ ಏರಲು ಪರಿತಪಿಸಿದರು. ಬೈಕ್ ಸವಾರರು ಮಳೆ ನಡುವೆ ಸಾಗಿದರು.

ಬಿಆರ್‌ಟಿ ವ್ಯಾಪ್ತಿಯ ಹುಲಿ ಅಭಯಾರಣ್ಯದಲ್ಲೂ ಸಂಜೆ ಉತ್ತಮ ಮಳೆ ಸುರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT