ಹನೂರು: ಹನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ನಿಶಾಂತ್ ಅವರಿಗೆ ಸೇರಿದ್ದು ಎನ್ನಲಾದ ₹10 ಲಕ್ಷ ಮೌಲ್ಯದ ಶಾಲಾ ಮಕ್ಕಳ ಶೂಗಳು, ಶಾಲಾ ಚೀಲ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಚುನಾವಣಾ ಸೆಕ್ಟರ್ ಅಧಿಕಾರಿಗಳು ಗುರುವಾರ ಮಧ್ಯಾಹ್ನ ವಶಪಡಿಸಿಕೊಂಡಿದ್ದಾರೆ.
ಶಾಲಾ ಬ್ಯಾಗ್‌ಗಳ ಮೇಲೆ ನಿಶಾಂತ್ ಅವರ ಫೋಟೊ ಮುದ್ರಿಸಲಾಗಿದೆ. 1,710 ಜೊತೆ ಶೂಗಳು, 610 ಬ್ಯಾಗ್‌ಗಳು, ಎರಡು ಚೀಲದಲ್ಲಿ ಕೆಂಪು ಬಣ್ಣದ ಟವಲ್‌ಗಳು ಮತ್ತು 15 ಬೆಡ್ ಶೀಟ್‌ಗಳನ್ನು ವಶಪಡಿಸಿಕೊಂಡು ಹನೂರು ಪೊಲೀಸರಿಗೆ ಹಸ್ತಾಂತರಿಸಿದ್ದು, ಪ್ರಕರಣ ದಾಖಲಾಗಿದೆ.
45 ಸೀರೆ ವಶ: ಕ್ಷೇತ್ರ ವ್ಯಾಪ್ತಿಯ, ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಸಂಗ್ರಹಿಸಿದ್ದ 45 ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡರು.
ಚಿಕ್ಕಮಗಳೂರು ವರದಿ: ಕಾರಿನಲ್ಲಿ ಸಾಗಿಸುತ್ತಿದ್ದ ₹ 3.5 ಲಕ್ಷ ನಗದನ್ನು ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಭಾಗದಲ್ಲಿ ಚುನಾವಣಾ ಸ್ಕ್ವಾಡ್ ತಂಡದವರು ವಶಕ್ಕೆ ಪಡೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.