‘ಐದು ಟ್ರಿಪ್‌ಗಳಲ್ಲಿ ಸಫಾರಿ’
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರತಿದಿನ 5 ಟ್ರಿಪ್‌ಗಳ ಸಫಾರಿ ನಡೆಯುತ್ತಿದೆ. ಇಲಾಖೆಯ ಸುಪರ್ದಿಯಲ್ಲಿರುವ 5 ಜಿಪ್ಸಿ ವಾಹನ 5 ಕ್ಯಾಂಪರ್ ಹಾಗೂ 7 ಮಿನಿ ಬಸ್‌ಗಳು ಸೇರಿ 17 ವಾಹನಗಳು ಸಫಾರಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತವೆ. ಜಂಗಲ್‌ಲಾಡ್ಜ್‌ನಿಂದಲೂ 10 ವಾಹನಗಳು ಸಫಾರಿಗೆ ತೆರಳುತ್ತಿವೆ. ಪ್ರತಿ ದಿನ ಬೆಳಿಗ್ಗೆ 6.30 ಹಾಗೂ 8 ಗಂಟೆಗೆ 2 ಟ್ರಿಪ್ ಮಧ್ಯಾಹ್ನ 2.30 3.30 ಹಾಗೂ 5 ಗಂಟೆಗೆ 3 ಟ್ರಪ್‌ಗಳಲ್ಲಿ ಸಪಾರಿ ನಡೆಯುತ್ತದೆ. ಸಚಿವರ ಆದೇಶದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯ ಟ್ರಿಪ್ ಕಡಿತಗೊಳ್ಳಲಿದೆ.