ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯದ ಕರ್ಫ್ಯೂ ನಡುವೆ ಜನ ಸಂಚಾರ, ವ್ಯಾಪಾರ

ಅಗತ್ಯ ವಸ್ತುಗಳ ಮಳಿಗೆ ಬಿಟ್ಟು ಬೇರೆ ಮಳಿಗೆಗಳನ್ನು ತೆರೆಯುವಂತಿಲ್ಲ
Last Updated 3 ಜುಲೈ 2021, 16:34 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ನಿಯಂತ್ರಣಕ್ಕಾಗಿ ಶನಿವಾರ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದರೂ, ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಮಳಿಗೆಗಳು ಉಳಿದ ದಿನಗಳಂತೆ ತೆರೆದಿದ್ದವು. ಜನ ಸಂದಣಿ ಕಾಣದಿದ್ದರೂ, ವಾಹನ ಹಾಗೂ ಸಾರ್ವಜನಿಕರ ಸಂಚಾರ ಹೆಚ್ಚಿತ್ತು.

ಸರ್ಕಾರದ ಆದೇಶದಂತೆ ವಾರಾಂತ್ಯದ ಕರ್ಫ್ಯೂ ಜುಲೈ 5ರವರೆಗೂ ಜಾರಿಯಲ್ಲಿದೆ. ಈ ಅವಧಿಯಲ್ಲಿ ಹಣ್ಣು, ತರಕಾರಿ, ಹಾಲು, ದಿನಸಿ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳಿಗೆ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯುವುದಕ್ಕೆ ಅವಕಾಶ. ಹೋಟೆಲ್‌, ಮದ್ಯದ ಅಂಗಡಿಗಳಲ್ಲಿ ಪಾರ್ಸೆಲ್‌ ಮಾತ್ರ ನೀಡಬಹುದು.

ಮೊಬೈಲ್‌, ಎಲೆಕ್ಟ್ರಾನಿಕ್ಸ್‌, ಹಾರ್ಡ್‌ವೇರ್‌, ಜವಳಿ, ಪಾದರಕ್ಷೆಗಳು ಸೇರಿದಂತೆ ಇತರ ಅಂಗಡಿಗಳಿಗೆ ತೆರೆಯುವುದಕ್ಕೆ ಅವಕಾಶ ಇಲ್ಲ.ಆದರೆ, ನಗರದಲ್ಲಿ ಶನಿವಾರ ಬಟ್ಟೆಯಂಗಡಿ, ಚಿನ್ನದ ಅಂಗಡಿ, ಕೆಲವು ಮೊಬೈಲ್‌ ಅಂಗಡಿಗಳನ್ನು ಬಿಟ್ಟರೆ ಉಳಿದ ಬಹುತೇಕ ಅಂಗಡಿಗಳು ತೆರೆದಿದ್ದವು. ಸರ್ಕಾರಿ ಕಚೇರಿಗಳಲ್ಲೂ ಹೆಚ್ಚಿನ ಜನ ಕಂಡು ಬಂದರು.

ಕರ್ಫ್ಯೂ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಲ್ಲಿ, ಬಸ್‌, ರೈಲುಗಳಲ್ಲಿ ಬೇರೆ ಊರಿಗೆ ಹೋಗುವವರನ್ನು ಬಿಟ್ಟು ಉಳಿದವರ ಸಂಚಾರಕ್ಕೆ ನಿರ್ಬಂಧವಿದೆ. ಅನಗತ್ಯವಾಗಿ ಯಾರೂ ಓಡಾಡುವಂತಿಲ್ಲ. ಆದರೆ, ಶನಿವಾರ ಜನರು ಹಾಗೂ ವಾಹನಗಳ ಸಂಚಾರ ಹೆಚ್ಚಿತ್ತು. ಸಾಮಾನ್ಯವಾಗಿ ಕರ್ಫ್ಯೂ ಸಂದರ್ಭದಲ್ಲಿ ಪೊಲೀಸರು ರಸ್ತೆಗಳಲ್ಲಿ ಇದ್ದು, ಅನಗತ್ಯವಾಗಿ ಓಡಾಡುತ್ತಿದ್ದವರನ್ನು ತಡೆಯುತ್ತಿದ್ದರು. ಶನಿವಾರ ಪೊಲೀಸರು ಕೂಡ ಕಂಡು ಬರಲಿಲ್ಲ.

ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಬಂದ ಪೊಲೀಸರು, ಅಂಗಡಿಗಳನ್ನು ಮುಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT