ಬುಧವಾರ, ಫೆಬ್ರವರಿ 19, 2020
28 °C

ದುರಾಸೆ ಪಟ್ಟರೆ ನಿರಾಸೆ ಖಚಿತ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಮನುಷ್ಯ ಬಹಳ ದುರಾಸೆ ಇಟ್ಟುಕೊಂಡರೆ ನಿರಾಸೆ ಆಗೇ ಆಗುತ್ತದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಡಗೂರು ಎಚ್‌.ವಿಶ್ವನಾಥ್‌ ಅವರನ್ನು ಕುಟುಕಿದರು.

ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷದ್ರೋಹ ಮಾಡಿದವರಿಗೆ ಇವೆಲ್ಲ ಆಗಲೇ ಬೇಕಾಗುತ್ತದೆ’ ಎಂದರು. 

ಹಣಕಾಸಿನ ಮುಗ್ಗಟ್ಟು: ರಾಜ್ಯ ಸರ್ಕಾರ ಹಣಕಾಸಿನ ಮುಗ್ಗಟ್ಟು ಅನುಭವಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಹಣ ಸರಿಯಾಗಿ ನೀಡುತ್ತಿಲ್ಲ. ಎಲ್ಲ ಕೆಲಸಗಳೂ ಸ್ಥಗಿತಗೊಂಡಿವೆ. ಯಡಿಯೂರಪ್ಪ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ನಮ್ಮ ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇರಲಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಶೂ ಹಾಕಲು ಸಹಾಯಕನ ನೆರವು: ಸಿದ್ದರಾಮಯ್ಯ ಅವರು ತಾಲ್ಲೂಕಿನ ನಲ್ಲೂರುಮೋಳೆಯ ಮಲ್ಲಿಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶೂ ತೆಗೆಯಲು ಹಾಗೂ ಹಾಕಲು ಸಹಾಯಕರೊಬ್ಬರ ನೆರವು ಪಡೆದುಕೊಂಡರು. 

ದೇವಸ್ಥಾನದ ಆವರಣಕ್ಕೆ ಪ್ರವೇಶಿಸುವುದಕ್ಕೂ ಮುನ್ನ ನಿಂತುಕೊಂಡೇ ಶೂ ಕಳಚಲು ಅವರು ಪ್ರಯತ್ನಿಸಿದರು. ಪಕ್ಕದಲ್ಲಿದ್ದ ಸಹಾಯಕರು ತಕ್ಷಣ ಕೆಳಗಡೆ ಬಗ್ಗಿ ಕಳಚಲು ನೆರವಾದರು. ದೇವಸ್ಥಾನ ಉದ್ಘಾಟಿಸಿ ವಾಪಸ್‌ ಹೊರಗೆ ಬಂದ ನಂತರ ಶೂ ಹಾಕಿದರು. ಎಡಗಾಲಿನ ಶೂ ಹಾಕಿದ್ದು ಸರಿಯಾಗದೇ ಇದ್ದುದರಿಂದ ಸಹಾಯಕ ಮತ್ತೆ ನೆರವಾದರು.

ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಕೆಳಗಡೆ ಸಹಾಯಕ ಶೂ ಸರಿ ಮಾಡುವುದರಲ್ಲಿ ನಿರತರಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು