ಅರಣ್ಯ ಸಚಿವರಿಗೆ ಜಯದೇವ ಪತ್ರ
‘ರಾಮೇಗೌಡರಿಗೆ ನೆರವಾಗಬೇಕು’ ಎಂದು ಕೋರಿ ಇಲ್ಲಿನ ದೀನಬಂಧು ಸಂಸ್ಥೆಯ ಮುಖ್ಯಸ್ಥ ಪ್ರೊ.ಜಿ.ಎಸ್.ಜಯದೇವ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಪತ್ರ ಬರೆದಿದ್ದಾರೆ. ‘ಪೂರ್ವಘಟ್ಟದ ತುದಿ, ಪಶ್ಚಿಮ ಘಟ್ಟಗಳ ಸೇತುವೆಯಾಗಿರುವ ಬಿಳಿಗಿರಿ ರಂಗನಬೆಟ್ಟ ಅಪರೂಪದ ಸಸ್ಯ ಸಂಕುಲಗಳ ತಾಣವಾಗಿದ್ದು, ರಾಮೇಗೌಡರು ನರ್ಸರಿ ನಿರ್ಮಿಸಿ ಅಪಾಯದಂಚಿನಲ್ಲಿರುವ ಸಸ್ಯಪ್ರಭೇದಗಳನ್ನು ರಕ್ಷಿಸುತ್ತಿದ್ದಾರೆ. ಕಾಡು ಉಳಿಸುವ ರಾಮೇಗೌಡರ ಕಾಯಕಕ್ಕೆ ಪ್ರೋತ್ಸಾಹ ನೀಡಬೇಕು’ ಎಂದಿದ್ದಾರೆ.