ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸ ಪ್ರಸಾದ್‌ ಸಾಧನೆ ಅಳಿಸಲಾಗದು: ಪುಟ್ಟರಂಗಶೆಟ್ಟಿ

ಸಂಸದ ಶ್ರೀನಿವಾಸ ಪ್ರಸಾದ್‌ ಉತ್ತರಕ್ರಿಯಾಧಿ; ಅಭಿಮಾನಿಗಳಿಂದ ಸ್ಮರಣೆ, ಅನ್ನದಾನ
Published 9 ಮೇ 2024, 13:46 IST
Last Updated 9 ಮೇ 2024, 13:46 IST
ಅಕ್ಷರ ಗಾತ್ರ

ಚಾಮರಾಜನಗರ: ಇತ್ತೀಚೆಗೆ ನಿಧನರಾದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ 12ನೇ ದಿನ ಉತ್ತರ ಕ್ರಿಯಾದಿ ಮತ್ತು ಭೂ ಶಾಂತಿ ಕಾರ್ಯಕ್ರಮದ ಅಂಗವಾಗಿ ಅವರ ಅಭಿಮಾನಿಗಳು, ವಿವಿಧ ಸಂಘಟನೆಗಳು ನಗರದ ವಿವಿಧೆಡೆ ಗುರುವಾರ ಪುಣ್ಯ ಸ್ಮರಣೆ, ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

ನಗರದ ಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಅಂಬೇಡ್ಕರ್ ಸೇನೆ, ಮಹೇಶ್ ಕುದರ್ ಅಭಿಮಾನಿ ಬಳಗ, ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಆಯೋಜಿಸಿದ್ದ  ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಶ್ರೀನಿವಾಸ ಪ್ರಸಾದ್ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿದರು.

ನಂತರ ಮಾತನಾಡಿದ ಅವರು, ‘ಶ್ರೀನಿವಾಸಪ್ರಸಾದ್ ಅವರು ನಮ್ಮಿಂದ ದೂರವಾಗಿರಬಹುದು. ಆದರೆ ಅವರು ಮಾಡಿರುವ ಸಾಧನೆಗಳ ಮೂಲಕ ಅವರು ಎಂದೆಂದಿಗೂ ಅಚ್ಚಳಿಯದೆ ಉಳಿದಿದ್ದಾರೆ’ ಎಂದರು.

‘ಆರು ಬಾರಿ ಸಂಸದರಾಗಿದ್ದು, ಒಮ್ಮೆ ಶಾಸಕರಾಗಿ ಸಚಿವರಾಗಿದ್ದರು. ಸ್ವಾಭಿಮಾನಿ, ನೇರ ನುಡಿ ರಾಜಕಾರಣಿಯಾಗಿದ್ದರು. ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದ್ದು, ಪಕ್ಷದ ತಳಮಟ್ಟದಿಂದ ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ.  

ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಗಣೇಶ್‌ಪ್ರಸಾದ್, ಯುವ ಮುಖಂಡ ಮಹೇಶ್ ಕುದರ್, ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಶಿವು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಾಜಿ ಸದಸ್ಯ ಚಿಕ್ಕಮಹದೇವು, ನಗರಸಭಾ ಸದಸ್ಯ ರಾಜಪ್ಪ, ಮಾಜಿ ಸದಸ್ಯ ಮಹಮ್ಮದ್ ಆಸ್ಗರ್,  ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಅಂತರರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಅಮಚವಾಡಿ ಶಿವಣ್ಣ, ಗೌತಮ್, ಅಮಿತ್, ದೀಪು, ಆರ್.ರಘುನಾಥ್, ರಾಮಸಮುದ್ರ ಬಸವರಾಜು ಹಾಜರಿದ್ದರು.

ರಾಮಸಮುದ್ರದಲ್ಲಿ ನುಡಿನಮನ: ರಾಮಸಮುದ್ರದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲೂ ಭಾಗವಹಿಸಿ ಮಾತನಾಡಿದ ಪುಟ್ಟರಂಗಶೆಟ್ಟಿ, ‘ಶ್ರೀನಿವಾಸಪ್ರಸಾದ್ ಅವರು ಕೇವಲ ದಲಿತ ನಾಯಕರಲ್ಲದೆ, ಎಲ್ಲ ಸಮುದಾಯಗಳ ನಾಯಕರಾಗಿದ್ದರು’ ಎಂದರು.

‘ಎಲ್ಲ ಸಮುದಾಯಗಳ ಬಗ್ಗೆ ಅಪಾರ ಪ್ರೀತಿ, ವಿಶ್ವಾಸ ಹೊಂದಿದ್ದರು. ಉಪ್ಪಾರ ಸಮುದಾಯ ವಾಸ ಮಾಡುವ ಮೋಳೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ನಾನು ಕೂಡ ರಾಜಕಾರಣದಲ್ಲಿ ಈ ಮಟ್ಟಕ್ಕೆ ಬರಲು ಪ್ರಸಾದ್ ಅವರು ಕಾರಣಕರ್ತರು. ಅವರನ್ನು ಎಂದೆಂದಿಗೂ ಮರೆಯುವುದಿಲ್ಲ’ ಎಂದು ಹೇಳಿದರು.

ರಾಮಸಮುದ್ರದ ದೊಡ್ಡ ಯಾಜಮಾನ ಬಿ, ನಾಗರಾಜು, ಯಾಜಮಾನರಾದ ಪಾಪಣ್ಣ, ನಂಜುಂಡ, ಬಸವರಾಜು, ಶಿವರಾಜು, ಅಂಜನೇಯ, ಡಿ.ನಂಜಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್,  ಮುಖಂಡ ಎ.ಎಚ್.ಖಾನ್, ನಗರಸಭಾ ಸದಸ್ಯ ಆರ್.ಎಂ.ರಾಜಪ್ಪ, ಮಾಜಿ ಸದಸ್ಯ ಬಸವರಾಜು, ಶ್ರೀನಿವಾಸ್ ಪ್ರಸಾದ್ ಅಭಿಮಾನಿ ಬಳಗದ ಎಲ್, ಪ್ರಸನ್ನ, ಚಿಗುರು ಬಂಗಾರು, ಕೆ.ನಾಗರಾಜು, ವೇಣು ಗೋಪಾಲ್, ಕೇಬಲ್ ಚಿನ್ನಣ್ಣ, ಆಟೊ ರಾಜು, ಜಿ.ರಾಜಪ್ಪ, ರಾಮು, ಮನು, ಕಿಟ್ಟ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಾಜರಿದ್ದರು. ಇದೇ ಸಂದರ್ಭದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಚಾಮರಾಜನಗರ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀನಿವಾಸ ಪ್ರಸಾದ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು
ಚಾಮರಾಜನಗರ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀನಿವಾಸ ಪ್ರಸಾದ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು

ದಲಿತರ ಆಶಾಕಿರಣ: ಮಂಜುನಾಥ ಪ್ರಸನ್ನ ನಗರದ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ನಡೆದ ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಮತ್ತು ಶ್ರೀನಿವಾಸ ಪ್ರಸಾದ್‌ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್‌ ಪ್ರಸನ್ನ ‘ಶ್ರೀನಿವಾಸ ಪ್ರಸಾದ್ ಅವರು ಬದುಕಿನ ಹೆಚ್ಚುಕಾಲ ರಾಜಕೀಯದಲ್ಲಿಯೇ ಕಳೆದರು. ಅವರು ನಡೆಸಿದ ಹೋರಾಟಗಳು ದಲಿತರಿಗೆ ಆಶಾಕಿರಣವಾಗಿದೆ’ ಎಂದರು. ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಕೃಷ್ಣಕುಮಾರ್‌ ಮಾತನಾಡಿ ‘ಶ್ರೀನಿವಾಸ್ ಪ್ರಸಾದ್ ಅವರು ಮೈಸೂರು ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದರು. ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು’ ಎಂದರು. ಸಂಘದ ಅಧ್ಯಕ್ಷ ಸಿ.ಕೆ.ರಾಮಸ್ವಾಮಿ ಮಾತನಾಡಿ ‘ಶ್ರೀನಿವಾಸ ಪ್ರಸಾದ್‌ ಅವರಿಗೆ ಚಾಮರಾಜನಗರದ ಜನತೆ ಎಂದರೆ ಬಹಳ ಪ್ರೀತಿ. ಅವರನ್ನು ಭೇಟಿ ಮಾಡಲು ಹೋದರೆ ಗೌರವದಿಂದ ಕಾಣುತ್ತಿದ್ದರು’ ಎಂದು ಸ್ಮರಿಸಿದರು. ‌ಸಂಘದ ಕಾರ್ಯದರ್ಶಿ ನಂಜುಂಡಸ್ವಾಮಿ ಖಜಾಂಚಿ ಪುಟ್ಟಸ್ವಾಮಿ ಶಿವಮೂರ್ತಿ ಕೃಷ್ಣಮೂರ್ತಿ ಶಂಕರಪ್ಪ ಈಶ್ವರ ನಟರಾಜು ಎಂ.ಡಿ.ಮಹದೇವಯ್ಯ ನಂಜರಾಜು ಶಂಕರ್‌ ಸಿದ್ದರಾಜು ಬಾಬು ಜಯರಾಮು ನಂದಿನಿ ಮಹದೇವಸ್ವಾಮಿ ಶ್ರೀಧರ್‌ ನಂದೀಶ ಜಯಶ್ರೀ ಪುಟ್ಟಗೋಪಮ್ಮ ಹಾಗೂ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT